

ಮೈಸೂರು: ಕುವೆಂಪುನಗರದ ಕರ್ನಾಟಕ ವಿಪ್ರ ವೇದಿಕೆ ಆನ್‌ಲೈನ್ ಮೂಲಕ ಹಮ್ಮಿಕೊಂಡ ‘ಸೆಲ್ಫಿ ವಿತ್ ಗಣೇಶ’ ಸ್ಪರ್ಧಾ ವಿಜೇತರಿಗೆ ವೇದಿಕೆ ಆವರಣದಲ್ಲಿ ಶುಕ್ರವಾರ ಬಹುಮಾನ ವಿತರಿಸಲಾಯಿತು.
ಟಿಕೆ ಲೇಔಟ್‌ನ ರಮ್ಯಾ (ಪ್ರಥಮ), ಬೊಂಬುಬಜಾರ್‌ನ ತೃಪ್ತಿ (ದ್ವಿತೀಯ),ರಾಮಕೃಷ್ಣನಗರ ಸುಮುಖ (ತೃತೀಯ), ಟಿಕೆ ಲೇಔಟ್‌ನ ಚೈತ್ರಾ ಚಂದ್ರಶೇಖರ್ (4ನೇ), ಕುವೆಂಪುನಗರದ ಪ್ರತಿಭಾ ಗುರುರಾಜ್ (5ನೇ) ಬಹುಮಾನ ಪಡೆದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕರ್ನಾಟಕ ವಿಪ್ರ ವೇದಿಕೆ ಸಂಚಾಲಕಿ ಸ್ವಾತಿ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಹಾಗೂ ಇತರರು ಇದ್ದರು.