ಸಂಸ್ಕೃತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ

13mlk1
ಕರ್ನಾಟಕ ಸಂಸ್ಕೃತ ವಿವಿ ಹಾಗೂ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ನಡೆಸಿದ ರಾಜ್ಯಮಟ್ಟದ ವಿವಿಧ ಸಂಸ್ಕೃತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಧಾರ್ಮಿಕದತ್ತಿ ಇಲಾಖೆಯ ಆಯುಕ್ತ ಡಾ.ಎಂ.ವಿ ವೆಂಕಟೇಶ್ ಬಹುಮಾನ ವಿತರಿಸಿದರು.
Published on

ಮೇಲುಕೋಟೆ: ಕರ್ನಾಟಕ ಸಂಸ್ಕೃತ ವಿವಿ ಹಾಗೂ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ವತಿಯಿಂದ ಇತ್ತೀಚೆಗೆ ನಡೆಸಿದ ರಾಜ್ಯಮಟ್ಟದ ಭಾಷಣ, ಕಂಠಪಾಠ, ಲೇಖನ ಸ್ಪರ್ಧೆಗಳಲ್ಲಿ 80 ಕಾಲೇಜಿನ 160 ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನಮಂಟಪವಾದ ಮೇಲುಕೋಟೆಯಲ್ಲಿ ಸಂಸ್ಕೃತದ ಉದ್ಘೋಷ ಮಾಡಿ ಮೆರುಗು ತಂದರು. ಇದೇ ವೇಳೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸನಾತನ ಶಿಕ್ಷಾಪದ್ದತೇಃ ವೈಲಕ್ಷಣಮ್ ಎಂಬ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ಎಂಜಿ ವಿಕಾಸ್ ಪ್ರಥಮ, ಹೊನ್ನಾವರ ರಾಘವೇಂದ್ರಭಾರತಿ ಸುವೇದ ಸಂಸ್ಕೃತ ಪಾಠಶಾಲೆಯ ರಾಜೇಶ ದತ್ತಾತ್ರೇಯ ಹೆಗಡೆ ದ್ವಿತೀಯ, ಆದಿಚುಂಚನಗಿರಿ ಕಾಲಭೈರೇಶ್ವರ ವೇದಾಗಮ ಮಹಾವಿದ್ಯಾಲಯದ ಸೋಮಶೇಖರ್ ತೃತೀಯ ಸ್ಥಾನ ಗಳಿಸಿದರು.

ಯತೀಂದ್ರ ಮತ ದೀಪಿಕಾಯಾಃ ವೈಶಿಷ್ಠ್ಯಂ ಲೇಖನ ಸ್ಪರ್ಧೆಯಲ್ಲಿ ಮೇಲುಕೋಟೆ ಆಚಾರ್ಯ ಪಾಠಶಾಲೆಯ ಪ್ರಜ್ವಲ್ ಪ್ರಥಮ, ಮೈಸೂರು ವಿಶ್ವಚೇತನ ಪಾಠಶಾಲೆಯ ದೃತಿ ವಿ.ಆತ್ರೇಯ ದ್ವಿತೀಯ, ಚಿತ್ರದುರ್ಗದ ಶ್ರೀ.ಮ.ನಿ.ಜ. ತೊಂಟದಾರ್ಯ ಸಂಸ್ಕೃತ ಪಾಠಶಾಲೆಯ ರಿಜವಾನ ಗೋಡೇಕಾರ ತೃತೀಯ ಬಹುಮಾನ ಪಡೆದರು. ತುಮಕೂರು ಸಿದ್ಧಗಂಗಾಮಠದ ಉದ್ಧಾನೇಶ್ವರ ವೇದ-ಸಂಸ್ಕೃತಪಾಠಶಾಲೆಯ ಲೋಹಿತ್ ಸಮಾಧಾನಕರ ಬಹುಮಾನ ಪಡೆದರು.

ಶ್ರೀಗೋಪಾಲ ವಿಂಶತಿ ಸ್ತ್ರೋತ್ರದ ಕಂಠಪಾಠ ಸ್ಪರ್ಧೆಯಲ್ಲಿ ತುಮಕೂರು ಸಿದ್ಧಗಂಗಾಮಠದ ಉದ್ಧಾನೇಶ್ವರ ವೇದ-ಸಂಸ್ಕೃತಪಾಠಶಾಲೆಯ ಮುಂಜುನಾಥ್ ಪ್ರಥಮ, ಮೈಸೂರಿನ ವಿಶ್ವಮಾನವ ವೇದ ಸಂಸ್ಕೃತ ಪಾಠಶಾಲೆಯ ವೈಷ್ಣವಿ ದ್ವಿತೀಯ, ತುಮಕೂರು ಬಸವೇಶ್ವರ ಸಂಸ್ಕೃತ ಪಾಠ ಶಾಲೆಯ ಪುನೀತ್ ಎಂ.ತೃತೀಯ, ಮಾನ್ವಿತ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಧಾರ್ಮಿಕದತ್ತಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ವಿತರಿಸಿದರು. ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಹಿರೇಮಠ, ಸಂಸ್ಕೃತ ಸಂಸ್ಥೆಯ ಕುಲಸಚಿವ ಎಸ್.ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net