

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಜಲ ದಿನ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯಿಂದ ಮಾ. 23ರಂದು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲಿ 3 ವಿಭಾಗಗಳಿಗೆ 3 ವಿಷಯ ನೀಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿ ವಿಭಾಗದಲ್ಲಿ ಅನುಕ್ರಮ ಸ್ಥಾನ ಪಡೆದ ಮೂವರು ಹಾಗೂ 20 ಸಮಾಧಾನಕರ ಬಹುಮಾನಗಳನ್ನು ಗುರುವಾರ ವಿತರಿಸಲಾಯಿತು.
1ರಿಂದ 4ನೇ ತರಗತಿಗೆ ನೀಡಲಾಗಿದ್ದ `ಪರಿಸರ' ವಿಷಯದ ಸ್ಪರ್ಧೆಯಲ್ಲಿ ಧಾರವಾಡ ತೇಜಸ್ವಿನಗರದ ತೇಜಸ್ವಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಶ್ರೀವರ್ಧನ್ ಹೆಗಡೆ ಪ್ರಥಮ, ಮೊರಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತನುಶ್ರೀ ಪಾಟೀಲ ದ್ವಿತೀಯ, ಕೆ.ಇ. ಬೋರ್ಡ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಿನಾಯಕ ಬಹದ್ದೂರ್‌ದೇಸಾಯಿಗೆ ತೃತೀಯ ಬಹುಮಾನ ನೀಡಲಾಯಿತು. ಈ ವಿಭಾಗದ 20 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
5ರಿಂದ 7ನೇ ತರಗತಿಗೆ ನೀಡಿದ್ದ `ನೀರು ಉಳಿಸಿ' ವಿಷಯದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ವಿ.ಎಸ್. ಪಿಳ್ಳೆ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಾನ್ವಿ ಯರಗೊಪ್ಪ ಪ್ರಥಮ, ಧಾರವಾಡ ಶಾಂತಿ ಸದನ ಹೈಸ್ಕೂಲ್‌ನ ಆನಮ್ ಸೌದಾಗರ ದ್ವಿತೀಯ, ಧಾರವಾಡ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನ ಶ್ಲೋಕ್ ನ್ಯಾಮಗೌಡರಗೆ ತೃತೀಯ ಬಹುಮಾನ ವಿತರಿಸಲಾಯಿತು. ಈ ವಿಭಾಗದ 20 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
8ರಿಂದ 9ನೇ ತರಗತಿಗೆ ನೀಡಿದ್ದ `ಜಾಗತಿಕ ತಾಪಮಾನ' ವಿಷಯದ ಸ್ಪರ್ಧೆಯಲ್ಲಿ ಧಾರವಾಡ ಆದರ್ಶ ವಿದ್ಯಾಲಯದ ಶ್ರೀನಿಽ ಪಾಟೀಲ ಪ್ರಥಮ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರೇರಣಾ ಹಿರೇಮಠ ದ್ವಿತೀಯ ಹಾಗೂ ಧಾರವಾಡ ಕೇಂದ್ರಿಯ ವಿದ್ಯಾಲಯದ ದೀಪಿಕಾ ಕರವೀರಕರಗೆ ತೃತೀಯ ಬಹುಮಾನ ನೀಡಲಾಯಿತು. 20 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
* ಬ್ಯಾಗ್, ನಗದು ಬಹುಮಾನ ಕೊಡುಗೆ:
ಮಕ್ಕಳ ಕಲಾ ಶ್ರೀಮಂತಿಕೆಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ವಿಜಯವಾಣಿಯಿಂದ 3 ಸಾವಿರ ರೂ., 2 ಸಾವಿರ ರೂ. ಹಾಗೂ 1 ಸಾವಿರ ರೂ. ನಗದು ಬಹುಮಾನ, ಪದಕ ವಿತರಿಸಲಾಯಿತು. ಎಲ್ಲ ವಿಭಾಗಗಳ ಒಟ್ಟು 69 ವಿದ್ಯಾರ್ಥಿಗಳಿಗೆ ಯು.ಕೆ. ಪ್ರಾಪರ್ಟೀಸ್‌ನ ಪಾಲುದಾರ ಜಯದೇವ ಹಿರೇಮಠ ಅವರು ಶಾಲಾ ಬ್ಯಾಗ್ ನೀಡಿ ಪ್ರೋತ್ಸಾಹಿಸಿದರು.
* ಮಹಿಳಾ ಮಂಡಳಗಳಿ0ದ ಮೆಚ್ಚುಗೆ:
ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಗುರುತಿಸುವ ವಿಜಯವಾಣಿಯ ಕಾರ್ಯಕ್ಕೆ ನಗರದ ವಿವಿಧ ಮಹಿಳಾ ಮಂಡಳಗಳ ಪದಾಽಕಾರಿಗಳು ಕೈ ಜೋಡಿಸಿದ್ದರು. ಸುಮಾರು ಒಂದೂವರೆ ಗಂಟೆ ನಡೆದ ಸ್ಪರ್ಧೆಯನ್ನು ಮಹಿಳೆಯರೇ ಮುಂದೆ ನಿಂತು ನಡೆಸಿಕೊಟ್ಟಿದ್ದರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕುಮಾರೇಶ್ವರನಗರ ಮಹಿಳಾ ಮಂಡಳದ ಜಯಶ್ರೀ ಎಸ್. ಪಾಟೀಲ, ಉಷಾ ಗದ್ದಗಿಮಠ, ಪ್ರೇಮಾ ನಡುವಿನಮನಿ, ಚೈತ್ರಾ ಸಂತಿ, ಮಟ್ಟಿ ಪ್ಲಾಟ್‌ನ ಸರಸ್ವತಿ ಜ್ಞಾನ ಮಹಿಳಾ ಮಂಡಳದ ನೇಹಾ ಬುದ್ನಿ, ಲಕ್ಷ್ಮೀ ಕೋಟೂರ, ವಿಜಯಲಕ್ಷ್ಮೀ ಆರ್. ಭೋಸಲೆ, ಇತರರು ಬಹುಮಾನ ವಿತರಿಸಿದರು.
ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಪ್ರಕಾಶ ಎಸ್. ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಹೀರಾತು ವಿಭಾಗದ ಜನರಲ್ ಮ್ಯಾನೇಜರ್ ಶಿವಾಜಿ ಭಿಸೆ, ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸಂತೋಷ ಇನಾಮತಿ ಹಾಗೂ ವಿದ್ಯಾರ್ಥಿಗಳ ಪಾಲಕರಿದ್ದರು. ಧಾರವಾಡ ಹಿರಿಯ ವರದಿಗಾರ ಮಂಜುನಾಥ ಎಸ್. ಅಂಗಡಿ ನಿರೂಪಿಸಿದರು.