ಬಹುಮಾನ ವಿತರಣೆ ಸಮಾರಂಭ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘವು ಮಕ್ಕಳ ಮನೆ ದತ್ತಿ ನಿಮಿತ್ತ ಮಕ್ಕಳ ಪ್ರತಿಭೋತ್ಸವದಲ್ಲಿ ಸ್ವರ ಸಂವಾದಿನಿ ಸಂಗೀತ ಶಾಲೆ ಮಕ್ಕಳಿಂದ ಗೀತ ಗಾಯನ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭವನ್ನು ನ. 19ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಏರ್ಪಡಿಸಿದೆ.

ಮಕ್ಕಳ ಸಾಹಿತಿ ಕೆ.ಎಚ್​. ನಾಯಕ ಬಹುಮಾನ ವಿತರಣೆ ಮಾಡುವರು. ಅತಿಥಿಗಳಾಗಿ ಜೆಎಸ್​ಎಸ್​ನ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ಜಿನದತ್ತ ಹಡಗಲಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net