ದನಗಳ ಜಾತ್ರೆಯಲ್ಲಿ ಬಹುಮಾನ ವಿತರಣೆ

Prize distribution at the cattle fair
ಶರಣಮುತ್ಯಾ ದನಗಳ ಜಾತ್ರೆಯಲ್ಲಿ ಮುತ್ತುಗೌಡ ಬಿರಾದಾರ ಅವರ ದ್ವೀತಿಯ ಸ್ಥಾನ ಪಡೆದ ಎರಡು ಹಲ್ಲಿನ ಹೋರಿಗೆ ಪ್ರಶಸ್ತಿ ಪತ್ರ, ಚೆಕ್​ನ್ನು ಎಪಿಎಂಸಿ ಕಾರ್ಯದರ್ಶಿ ಆರ್​.ಎಸ್​.ರಾಠೋಡ ನೀಡಿದರು.
Published on

ತಾಳಿಕೋಟೆ: ಪಟ್ಟಣದ ಶ್ರೀ ಸದ್ಗುರು ಸಾಂಭಪ್ರಭು ಶರಣಮುತ್ಯಾರ ಜಾನುವಾರುಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ತಳಿ ಜಾನುವಾರುಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ರಾಜ್ಯ ಕೃಷಿಕ ಮಾರಾಟ ಮಂಡಳಿ, ತಾಳಿಕೋಟೆ ಸಹಕಾರಿ ಬ್ಯಾಂಕ್​ ಸಹಯೋಗದಲ್ಲಿ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಆರ್​.ಎಸ್​.ರಾಠೋಡ ಜಾನುವಾರುಗಳ ಪಾಲನೆ ಪೋಷಣೆಯಲ್ಲಿ ರೈತರು ಆಸಕ್ತಿ ವಹಿಸಬೇಕು. ಮಕ್ಕಳಂತೆ ಅವುಗಳ ಪಾಲನೆ ಮಾಡಬೇಕು ಎಂದು ಸಲಹೆ ನಿಡಿದರು.

ಅಶೋಕ ನಾಯ್ಕೋಡಿ(ಶಳ್ಳಗಿ) ಅವರ ಪ್ರಥಮ ಸ್ಥಾನ ಪಡೆದ ಹಾಲು ಹಲ್ಲಿನ ಹೋರಿಗೆ 10 ಸಾವಿರ ರೂ. ಹಾಗೂ ದ್ವೀತಿಯ ಬಹುಮಾನ ಪಡೆದ ಬಳಗಾನೂರಿನ ಮುತ್ತುಗೌಡ ಬಿರಾದಾರ ಅವರ ಎರಡು ಹಲ್ಲಿನ ಹೋರಿಗೆ 7500 ರೂ, ತತೀಯ ಬಹುಮಾನ ಪಡೆದ ಗೊಟಖಂಡ್ಕಿಯ ರುದ್ರಸ್ವಾಮಿ ಹಿರೇಮಠ ಅವರ 4 ಹಲ್ಲಿನ ಹೋರಿಗೆ 5 ಸಾವಿರ ರೂ. ಬಹುಮಾನ ವಿತರಿಸಲಾಯಿತು.

ತಾಳಿಕೋಟೆಯ ಸಹಕಾರಿ ಬ್ಯಾಂಕ್​ ವತಿಯಿಂದ ಹರನಾಳ ಗ್ರಾಮದ ಶಿವಪ್ಪ ನಾಗೂರ ಅವರ ಕೀಲಾರಿ ಆಕಳಿಗೆ ಹತ್ತು ಸಾವಿರ ರೂ. ನಗದು ಬಹುಮಾನವನ್ನು ಬ್ಯಾಂಕ್​ ಅಧ್ಯ ಕಾಶಿನಾ ಹಾಗೂ ಉಪಾಧ್ಯ ಚಿಂತಪ್ಪಗೌಡ ಯಾಳಗಿ ನೀಡಿದರು.

ಸಹಕಾರಿ ಬ್ಯಾಂಕ್​ ಅಧ್ಯ ಕಾಶಿನಾಥ ಸಜ್ಜನ, ಶರಣರ ಮಠದ ಬಸಣ್ಣ ಶರಣರ ಮುತ್ಯಾ, ಶರಣಪ್ಪ ಶರಣರ ಮುತ್ಯಾ, ಮಲ್ಲಣ್ಣ ಶರಣರ, ಸಿದ್ದಣ್ಣ ಶರಣರ, ಎಂ.ಎಸ್​.ಸರಶೆಟ್ಟಿ, ಮಹಾದೇವಪ್ಪ ಕುಂಭಾರ, ಕೆ.ಎಸ್​.ಮುರಾಳ, ವಿಶ್ವನಾಥ ಬಿದರಕುಂದಿ, ಮಲ್ಲಯ್ಯ ಹಿರೇಮಠ, ಮಲ್ಲು ಇಂಗಳಗಿ, ಈರಣ್ಣ ಶರಣರ, ಸಾಂತಗೌಡ ಬಿರಾದಾರ, ಶಿವನಗೌಡ ಪೊಲೀಸ್​ಪಾಟೀಲ, ಭೀಮನಗೌಡ ಪಾಟೀಲ, ಅಂಬರೀಶ ಮಡಿವಾಳರ, ಸಚೀನ ನಾಲತವಾಡ, ಎಪಿಎಂಸಿಯ ರವಿ ರಾಠೋಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net