

ಬಂಟ್ವಾಳ: ಬಸ್ತಿಪಡ್ಪು, ಬಿ.ಸಿ.ರೋಡ್ ಹಾಗೂ ಮಡಂತ್ಯಾರಿನಲ್ಲಿ ಮಳಿಗೆ ಹೊಂದಿರುವ ಭದ್ರಾ ಹೋಂ ಅಪ್ಲೈನ್ಸಸ್ ಗೃಹೋಪಯೋಗಿ ಉತ್ಪನ್ನಗಳ ಮಾರಾಟದಲ್ಲಿ ತನ್ನ ವಿಶ್ವಾಸಾರ್ಹ ಸೇವೆಯ ಮೂಲಕ ಗಮನ ಸೆಳೆದಿದ್ದು, ದೀಪಾವಳಿಯ ಸಂದರ್ಭ ಗ್ರಾಹಕರಿಗೆ ವಿಜಯವಾಣಿ ಸಹಯೋಗದಲ್ಲಿ ನಡೆದ ವಿಜಯವಾಣಿ ವಿಜಯೋತ್ಸವ ಅದೃಷ್ಟ ಚೀಟಿಯ ಬಹುಮಾನ ವಿತರಣೆ ಮಡಂತ್ಯಾರು ಮಳಿಗೆಯಲ್ಲಿ ಬುಧವಾರ ನಡೆಯಿತು.
ಭದ್ರಾ ಗ್ರಾಹಕ ಮಡಂತ್ಯಾರಿನ ಸುರೇಶ್ ಪೂಜಾರಿ, ಭದ್ರಾ ಸಂಸ್ಥೆಯ ಮಾಲೀಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಅವರಿಂದ ಚಿನ್ನದ ನಾಣ್ಯ ಬಹುಮಾನ ಪಡೆದರು. ಈ ಸಂದರ್ಭ ಭದ್ರಾ ಸಂಸ್ಥೆ ತನ್ನ ಗ್ರಾಹಕರಿಗೆ ಕ್ರಿಸ್‌ಮಸ್, ಹೊಸ ವರ್ಷದ ನಿಮಿತ್ತ ನೀಡಿದ್ದ ಅದೃಷ್ಟ ಚೀಟಿಯ ಡ್ರಾ ನಡೆಯಿತು. ಮಾಲ್ಸಿ ಆಚಾರ್ಯ ಬಂಪರ್ ಬಹುಮಾನಿತರ ಆಯ್ಕೆ ಮಾಡಿದರು.