ವಿಜಯೋತ್ಸವದ ಅದೃಷ್ಟಶಾಲಿಗಳಿಗೆ ಕಾರ್, ಬೈಕ್ ವಿತರಣೆ: ಜನಮನ ಸೆಳೆಯುತ್ತಿರುವ ವಿಜಯವಾಣಿ ವಿಜಯೋತ್ಸವ

Vijayavani
Published on

ಹುಬ್ಬಳ್ಳಿ: ದಸರಾ-ದೀಪಾವಳಿ ಹಬ್ಬದ ನಿಮಿತ್ತ ಏರ್ಪಡಿಸಿದ್ದ ವಿಜಯವಾಣಿ ವಿಜಯೋತ್ಸವ ಅದೃಷ್ಟಶಾಲಿ ಗ್ರಾಹಕರಿಗೆ ಶನಿವಾರ ಸುದಿನ. ಹುಬ್ಬಳ್ಳಿ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು, ಪ್ರಸನ್ನ ಬಿ. ಅವರಿಗೆ ಕಾರ್ ಹಾಗೂ ಮೌಲಾಸಾಬ ದಂಡಿನ ಅವರಿಗೆ ಬೈಕ್ ಕೀಲಿ ವಿತರಿಸಿದರು.

ಸಮಾರಂಭದ ಬಳಿಕ ಆನಂದ ಸಂಕೇಶ್ವರ ಅವರು ಮಾತನಾಡಿ, ಸದಾ ಹೊಸತನ್ನು ನೀಡುವತ್ತ ವಿಆರ್​ಎಲ್ ಸಮೂಹ ಸಂಸ್ಥೆ ಯೋಚಿಸುತ್ತಿದೆ. 2012ರಲ್ಲಿ ಆರಂಭವಾದ ‘ವಿಜಯವಾಣಿ’ ಪತ್ರಿಕೆ 24 ತಿಂಗಳಲ್ಲಿಯೇ ರಾಜ್ಯದ ನಂ. 1 ಆಗಿ ಹೊರಹೊಮ್ಮಿತು. ಹೊಸ ಹೊಸ ಯೋಚನೆ, ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಜನರ ಮನ, ಮನೆಯನ್ನು ತಲುಪುತ್ತಿದ್ದೇವೆ ಎಂದರು.

ವಿಜಯವಾಣಿ- ದಿಗ್ವಿಜಯ 247 ನ್ಯೂಸ್ ಚಾನೆಲ್ ಮೂಲಕ 45 ದಿನ ರೂಪಿಸಿದ್ದ ದಸರಾ- ದೀಪಾವಳಿ ವಿಜಯೋತ್ಸವ ಕಾರ್ಯಕ್ರಮ ಇಡೀ ರಾಜ್ಯದ ಗಮನ ಸೆಳೆಯಿತು. 7 ಲಕ್ಷಕ್ಕೂ ಹೆಚ್ಚು ಕೂಪನ್​ಗಳು ಬಂದಿದ್ದವು. ಪತ್ರಿಕೆಯ 10 ಬ್ಯೂರೋಗಳಲ್ಲಿ ಗ್ರಾಹಕರಿಗೆ ಬಹುಮಾನ ವಿತರಿಸಲಾಗಿದೆ ಎಂದು ವಿವರಿಸಿದರು. ಪ್ರತಿ ವರ್ಷ ಆಟೋ, ಪ್ರಾಪರ್ಟಿ ಮತ್ತು ಎಜುಕೇಷನ್

ಎಕ್ಸ್​ಪೋ ಹಮ್ಮಿಕೊಳ್ಳಲಾಗುತ್ತಿದೆ. ಬಹಳಷ್ಟು ಜನರು ಎಕ್ಸ್​ಪೋದಲ್ಲಿ ಭಾಗವಹಿಸಿ ಖುಷಿಪಡುತ್ತಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ‘ಅಷ್ಟ ವಿನಾಯಕ’ ಹಾಗೂ ‘ಚೆಂದದ ಪುಟಾಣಿ’ ಸ್ಪರ್ಧೆಗಳೂ ಜನರ ಮನ ಸೆಳೆದಿವೆ. ಯೋಗ ಗುರು ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿತು. 2020ರ ‘ವಿಜಯವಾಣಿ ವಿಜಯೋತ್ಸವ’ವನ್ನು ಮತ್ತಷ್ಟು ಅದ್ದೂರಿಯಾಗಿ ಏರ್ಪಡಿಸಲು ನಿರ್ಧರಿಸಲಾಗಿದೆ. ಹೊಸ ವಿಚಾರಗಳಿದ್ದರೆ ಸಲಹೆ ಕೊಡಬಹುದು ಎಂದು ಆನಂದ ಸಂಕೇಶ್ವರ ಹೇಳಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಸಿಯಾರಾಮ್ ಮಳಿಗೆ ಪಾಲುದಾರ ಪ್ರೀತೇಶ್ ಚೌಧರಿ ಮಾತನಾಡಿ, ಎರಡು ವರ್ಷದಿಂದ ವಿಜಯವಾಣಿ ವಿಜಯೋತ್ಸವದಲ್ಲಿ ಭಾಗವಹಿಸುತ್ತಿದ್ದೇವೆ. ಗ್ರಾಹಕರು ಮತ್ತು ಅಂಗಡಿಗಳ ಮಾಲೀಕರ ಮಧ್ಯೆ ಸಹಕಾರ, ಸ್ನೇಹ, ವೃತ್ತಿಪರತೆ ಹೆಚ್ಚಿಸಲು ಅನುಕೂಲವಾಗಿದೆ. ವ್ಯಾಪಾರ-ವಹಿವಾಟು ವೃದ್ಧಿಗೂ ಕಾರಣವಾಗಿದೆ. ಗ್ರಾಹಕರು ಮತ್ತಷ್ಟು ವಿಶ್ವಾಸದಿಂದ ನಡೆದುಕೊಳ್ಳುವಂತೆ ಮಾಡಿದೆ ಎಂದರು. ವಿಜಯವಾಣಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಹಾಗೂ ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ಕಾರ್ಯಕ್ರಮ ನಡೆಸಿಕೊಟ್ಟರು.

ನನ್ನ ಮಗಳಿಗೆ ಕಾರು ಅಂದರೆ ಬಹಳ ಇಷ್ಟ. 15 ದಿನ ಹಿಂದೆಯಷ್ಟೇ ಪಪ್ಪಾ ಕಾರು ಬೇಕು ಅಂದಿದ್ದಳು. ಸಿಯಾರಾಮ್ಲ್ಲಿ ಬಟ್ಟೆ ಖರೀದಿಸಿ, ವಿಜಯೋತ್ಸವದ ಕೂಪನ್ ಭರ್ತಿ ಮಾಡಿದ್ದೆ. ಮಗಳು ಕಾರು ಕೇಳಿ ಕೆಲ ದಿನಗಳಲ್ಲಿಯೇ ಕಾರು ಗೆದ್ದಿರುವ ವಿಷಯ ಗೊತ್ತಾಯಿತು. ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿ ವಾಹಿನಿಯಿಂದಾಗಿ ನಮ್ಮ ಮನೆಗೆ ಕಾರು ಬರುವಂತಾಯಿತು.

| ಪ್ರಸನ್ನ ಬಡಿಗೇರ ನವನಗರ, ಹುಬ್ಬಳ್ಳಿ (ಕಾರು ವಿಜೇತರು)

ಬಿಗ್ ಮಿಶ್ರಾ ಅಂಗಡಿಯಲ್ಲಿ ಪೇಡಾ ಖರೀದಿಸಿದ್ದೆವು. ಆಗ ಅಂಗಡಿಯವರು ನೀಡಿದ್ದ ವಿಜಯೋತ್ಸವದ ಕೂಪನ್ ಭರ್ತಿ ಮಾಡಿದ್ದೆವು. ಬೈಕ್ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೆ ಯಾವುದಾದರೂ ಉತ್ತಮ ಬಹುಮಾನ ಬರಲಿ ಎಂದು ಪ್ರಾರ್ಥಿಸಿದ್ದೆ. ಬೈಕ್ ಗೆದ್ದಿರುವುದು ಸಂತಸ ತಂದಿದೆ.

| ಮೌಲಾಸಾಬ ದಂಡಿನ ಕಮಡೊಳ್ಳಿ (ಬೈಕ್ ವಿಜೇತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net