ನೇತ್ರತಜ್ಞೆ ಪ್ರಿಯಾಂಕಾಗೆ ಫೆಲೋಶಿಪ್

priyanka gumaste
Published on

ಹುಬ್ಬಳ್ಳಿ: ನೇತ್ರತಜ್ಞೆ ಡಾ.ಪ್ರಿಯಾಂಕಾ ಗುಮಾಸ್ತೆ (ದೇಸಾಯಿ) ಅಮೆರಿಕ ಫ್ಲೋರಿಡಾದ ಪ್ರತಿಷ್ಠಿತ ಮಾಯೋ ಕ್ಲಿನಿಕ್​ನಿಂದ ಫೆಲೋಶಿಪ್ ಪಡೆದಿದ್ದಾರೆ. ಧಾರವಾಡದ ಡಾ. ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಪ್ರಿಯಾಂಕಾ ಅವರು ಗ್ಲುಕೋಮಾ ವಿಷಯದ ಕುರಿತಂತೆ ಅಧ್ಯಯನಕ್ಕಾಗಿ ಅಮೆರಿಕ ತೆರಳಲಿದ್ದಾರೆ. ಇವರ ಸಾಧನೆಗೆ ಖ್ಯಾತ ನೇತ್ರತಜ್ಞ ಡಾ. ಎಂ. ಎಂ. ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net