VIDEO| ಮೈಲಾರಿ ಹೋಟೆಲ್​ ದೋಸೆ ರುಚಿಗೆ ಪ್ರಿಯಾಂಕ ಫಿದಾ; ಸ್ವತಃ ದೋಸೆ ಮಾಡಿದ ನಾಯಕಿ

priyanka Gandhi
Published on

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ತಮ್ಮ ಪಕ್ಷಗಳತ್ತ ಮತದಾರರನ್ನು ಸೆಳೆಯಲು ನಾಯಕರು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.

ಇನ್ನು ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಪರ ಪ್ರಚಾರದಲ್ಲಿ ತೊಡಗಿರುವ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಮೈಸೂರಿನ ಸುಪ್ರಸಿದ್ದ ಮೈಲಾರಿ ಹೋಟೆಲ್​ ದೋಸೆ ಸವಿದಿದ್ದಾರೆ.

ದೋಸೆ ಮಾಡಿದ ಪ್ರಿಯಾಂಕ

ಇನ್ನು ಮೈಲಾರಿ ಹೋಟೆಲ್​ಗೆ ಬೆಳಗಿನ ಉಪಃಆರಕ್ಕೆ ತೆರಳಿದ್ದ ಪ್ರಿಯಾಂಕ ಗಾಂಧಿಗೆ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್​ ಹಾಗೂ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಸಾಥ್​ ನೀಡಿದ್ದರು.

ಈ ವೇಳೆ ಅಡುಗೆ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ ಹೋಟೆಲ್​ ಸಿಬ್ಬಂದಿ ಜೊತೆ ಮಾತನಾಡುತ್ತಾ ದೋಸೆಯನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು

ಈ ಕುರಿತು ಟ್ವೀಟ್​ ಮಾಡಿರುವ ಪ್ರಿಯಾಂಕ ಇತಿಹಾಸ ಪ್ರಸಿದ್ಧ ಮೈಲಾರಿ ಹೋಟೆಲ್​ಗೆ ಭೇಟಿ ನೀಡಿ ಅಲ್ಲಿನ ದೋಸೆಗಳನ್ನು ಸವಿದೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಇದು ಜೀವಂತ ಉದಾಹರಣೆಯಾಗಿದೆ.

ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು ನನ್ನ ಮಗಳೊಂದಿಗೆ ಬಂದು ಇಲ್ಲಿ ದೋಸೆ ಸವಿಯಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ದೋಸೆ ರೆಸಿಪಿ ಕೇಳಿದ್ರು

ಇನ್ನು ಪ್ರಿಯಾಂಕ ಗಾಂಧಿ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಮೈಲಾರಿ ಹೋಟೆಲ್​ ಮಾಲೀಕರು ಸಂತಸ ವ್ಯಕ್ತಪಡಿಸಿದ್ದು ದೋಸೆ ಹಿಟ್ಟಿಗೆ ಬಳಸುವ ರೆಸಿಪಿಯನ್ನು ಕೇಳಿದ್ದರು.

ನಮ್ಮ ಹೋಟೆಲ್​ಗೆ ತುಂಬಾ ಜನ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ. ಆದರೆ, ಇವರು ನಮ್ಮೊಂದಿಗೆ ಕೆಲಕಾಲ ಮಾತನಾಡಿ ಫೋಟೋವನ್ನು ತೆಗೆಸಿಕೊಂಡು ಮತ್ತೊಮ್ಮೆ ಬರುವುದಾಗಿ ಹೇಳಿದರು ಎಂದು ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net