ಪ್ರಿಯಾಂಕಾ ಬನಸೋಡೆಗೆ ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ

PRIYANKA BANASODE
ಪ್ರಿಯಾಂಕಾ ಬನಸೋಡೆ, ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ಪುರಸ್ಕೃತೆ
Published on

ವಿಜಯಪುರ: ರಾಯಚೂರಿನ ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಸಂಸ್ಥೆಯ 120ನೇ ಕಾರ್ಯಕ್ರಮ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ವಿಜಯಪುರದ ಡಾ. ಪ್ರಿಯಾಂಕಾ ಬನಸೋಡೆ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.

ಪ್ರಿಯಾಂಕಾ ಬನಸೋಡೆ ಅವರು ಬೆಳಗಾವಿ, ವಿಜಯಪುರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಜೊತೆಗೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಅಂತರ್ಯಾಮಿ ಫೌಂಡೇಶನ್, ಬೆಳಗಾವಿಯ ಮುಖ್ಯ ಸಲಹಾ ಸಮಿತಿ ಸದಸ್ಯರಾಗಿ ಸಾಮಾಜಿಕ ಕಾರ್ಯದಲ್ಲೂ ತೊಡಗಿದ್ದಾರೆ. ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ಪ್ರೇರಣೆಯಾಗಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ. ಸೆ. 21ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net