

ವಿಜಯಪುರ: ಆರ್ಎಸ್ಎಸ್ ನಿಷೇಧಿಸುವ ಕುರಿತು ಸಚಿವ ಪ್ರಿಯಾಂಕ್ ರ್ಖಗೆ ಅವರು ನೀಡಿದ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ನಗರ ಮಂಡಳ ವತಿಯಿಂದ ಅಧ್ಯ ಸಂದೀಪ ಪಾಟೀಲ(ಝಳಕಿ) ನೇತೃತ್ವದಲ್ಲಿ ಇಲ್ಲಿನ ವಾರ್ಡ್ ನಂ. 7ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ "ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್ಎಸ್ಎಸ್ನ್ನು ಪ್ರೀತಿಸುತ್ತಾರೆ' ಎಂಬ ಅಭಿಯಾನದ ಪೋಸ್ಟರ್ ಅಂಟಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಸಂವಿಧಾನ ಸ್ವತಂತ್ರವಾಗಿ ಮಾತನಾಡುವ, ಸಂ&ಸಂಸ್ಥೆಗಳ ಚಟುವಟಿಕೆ ನಡೆಸುವ ಹಾಗೂ ಸಂ&ಸಂಸ್ಥೆ ಸ್ಥಾಪಿಸುವ ಅಧಿಕಾರ ಕರುಣಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ರ್ಖಗೆ ಸಂ ಸಂಸ್ಥೆ ನಿಷೇಧಿಸಿ ಎಂದು ಹೇಳುವ ಮೂಲಕ ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನೇ ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಪ್ರಿಯಾಂಕ್ ಅವರಿಗೆ ಜನರ ನೋವು ಗೊತ್ತಿಲ್ಲ. ಸಂ ಪರಿವಾರದ ಜನಪರ ಕಾರ್ಯ, ದೇಶಭಕ್ತಿ ಅದಮ್ಯ ಭಾವನೆ ಬಗ್ಗೆ ಅವರು ಮೊದಲು ತಿಳಿಯಲಿ. ಈ ರೀತಿ ಒಂದು ಜನಪರ, ದೇಶಭಕ್ತಿ ಸಂಟನೆ ಮೇಲೆ ಆರೋಪ ಮಾಡಿರುವ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಯುವಕರಲ್ಲಿ ದೇಶಭಕ್ತಿಯ ಪವಿತ್ರ ಭಾವ ಬೆಳೆಸುವ ಜತೆಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸ್ವಯಂ ಸೇವಕರು ಸ್ವಯಂಪ್ರೇರಣೆಯಿಂದ ಜನರ ನೆರವಿಗೆ ಧಾವಿಸುತ್ತಾರೆ. ಆದರೆ, ಎಲ್ಲಿಯೂ ಪ್ರಚಾರ ಪಡೆದುಕೊಳ್ಳದೆ ನಿಸ್ವಾರ್ಥದಿಂದ ದುಡಿಯುವ ಕೋಟಿ ಕೋಟಿ ಮನಸುಗಳು ಸಂ ಪರಿವಾರದಲ್ಲಿವೆ ಎಂದು ಹೇಳಿದರು.ನಗರ ಮಂಡಳ ಅಧ್ಯ ಸಂದೀಪ ಪಾಟೀಲ ಮಾತನಾಡಿದರು. ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಚಂದ್ರಶೇಖರ ಕವಟಗಿ, ಶ್ರೀಶೈಲ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಪಾಪುಸಿಂಗ್ ರಜಪೂತ, ಚಿನ್ನು ಚಿನ್ನುಗುಂಡಿ, ವಿಜಯ ಜೋಶಿ, ಸಚಿನ ಬೊಂಬಳೆ, ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ, ಮಂಥನ ಗಾಯಕವಾಡ, ನಿಖಿಲ್ ಮ್ಯಾಗೇರಿ, ಹನುಮಂತ ಭಜಂತ್ರಿ, ಅಪ್ಪು ಕುಂಬಾರ, ಸದಾಶಿವ ಪೂಜಾರಿ, ಪ್ರವಿಣ ಕಟ್ಟಿಮನಿ, ವಿಕಾಸ ಚವಾಣ, ಕಿಶೋರ ದೊಕಡೆ, ಅಪ್ಪು ಮಸ್ಕಿ, ಕಿರಣ ಮೋರೆ, ದತ್ತಾ ಗೋಲಾಂಡೆ, ರಾಯಪ್ಪ ಹಳ್ಳಿ, ಬಸವರಾಜ್ ರೆಡ್ಡಿ, ಸುಹಾಸ ವಲ್ಯಾಪುರ ಮತ್ತಿತರರಿದ್ದರು.
ಫೋಟೋ : ಎಂಎಂ 14&10
ವಿಜಯಪುರ ನಗರದ ವಾರ್ಡ್ ನಂ. 7 ರಲ್ಲಿ ಹಮ್ಮಿಕೊಂಡಿದ್ದ ಆರ್ಎಸ್ಎಸ್ ಅಭಿಯಾನಕ್ಕೆ ಗಣ್ಯರು ಚಾಲನೆ ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ, ಸಂದೀಪ ಪಾಟೀಲ ಮತ್ತಿತರರಿದ್ದಾರೆ.