

ಬಾಗಲಕೋಟೆ:ಸಚಿವ ಪ್ರಿಯಾಂಕ್ ರ್ಖಗೆ ಅವರು ತಮ್ಮ ರಾಜಕೀಯ ದುರಾಡಳಿತ ಮುಚ್ಚಿಡಲು ಹಾಗೂ ತಮ್ಮ ವೈಯಕ್ತಿಕ ವರ್ಚಸ್ಸಿಗಾಗಿ ಆರ್ಎಸ್ಎಸ್ ಹೆಸರುನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಬಿಟ್ಟಿ ಪ್ರಚಾರದ ಗೀಳು ಶುರುವಿಟ್ಟುಕೊಂಡಿರುವುದು ಖೇಧಕರ ಎಂದು ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ರೇಸಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಹಿಂದಿಕ್ಕಿ ಆರ್ಎಸ್ಎಸ್ ಬಗ್ಗೆ ಅಪಪ್ರಚಾರ ಹೆಸರಲ್ಲಿ ತಂತ್ರಗಾರಿಕೆ ಹೂಡಿ ಕೈ ಪದಲ್ಲಿ ಡಿಕೆ ಅವರಿಗೆ ಎಚ್ಚರಿಕೆ ಗುನ್ನ ನೀಡಿದ್ದೇ ರ್ಖಗೆ ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.
ರಾಜಕಾರಣದಲ್ಲಿ ಜೂನಿಯರ್ ಆಗಿದ್ದರೂ ಸದ್ಯ ಡಬಲ್ ಖಾತೆ ಹೊಂದಿದ್ದಾರೆ. ಇವರಿಗಿಂತಲೂ ಹಿರಿಯರಾಗಿರುವ ಕೆ.ಎಚ್. ಮುನಿಯಪ್ಪ ಮತ್ತೆ ಆರ್.ಬಿ. ತಿಮ್ಮಾಪುರ ಅವರಿಗೆ ಎರಡನೇ ದರ್ಜೆ ಖಾತೆಯಿದೆ.
ಇದು ಇವರ ಸ್ವಹಿತಾಸಕ್ತಿ ರಾಜಕೀಯ ನಡೆ ಎಂದು ಖಾರವಾಗಿ ಪ್ರಶ್ನಿಸಿ, ಇವರ ರಾಜಕೀಯ ತಂತ್ರಗಾರಿಕೆಗೆ ಅಪಮಾನ ಎದುರಿಸಿದ ದಿವಂಗತ ಶ್ರೀನಿವಾಸ ಪ್ರಸಾದ್, ಡಾ. ಎ.ಬಿ. ಮಲಕರಡ್ಡಿ ಡಾ. ಉಮೇಶ್ ಜಾಧವ್ ಹಾಗೂ ಬಾಬುರಾವ್ ಚಿಂಚನಸೂರ್ ಇವರೆಲ್ಲ ರ್ಖಗೆ ಕುಟುಂಬದಿಂದ ದೂರ ಉಳಿದರು. ಇದರಿಂದ ಹತಾಶೆಗೊಂಡಿರುವ ಪ್ರಿಯಾಂಕ್ ರ್ಖಗೆ ರಾಜಕೀಯವಾಗಿ ಮುನ್ನೆಲೆಗೆ ಬರಲು ಆರ್ಎಸ್ಎಸ್ ಹೆಸರಲ್ಲಿ ಕುತಂತ್ರಮಾಡಿ ನಿಷೇಧಿಸಲು ಪತ್ರ ಬರೆದು ಹೀರೋ ಆಗೋಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.
ಇವತ್ತಿಗೂ ರಾಜ್ಯದಲ್ಲಿ ಮತ್ತು ನಿಮ್ಮ ಕಲಬುರ್ಗಿ ಜಿಲ್ಲೆಯಲ್ಲಿರುವ ಹಳ್ಳಿಗಳಲ್ಲಿ ಸಾರ್ವಜನಿಕ ದೇವಸ್ಥಾನ ಹೋಟೆಲ್ಗಳಲ್ಲಿ ಅಸ್ಪಶ್ಯರಿಗೆ ಪ್ರವೇಶ ಇಲ್ಲ. ಇದರ ಕುರಿತು ಸಿಎಂ ಸಿದ್ದರಾಮಯ್ಯ ಪತ್ರ ಬರೆಯಲಿಲ್ಲ ಯಾಕೆ? 1918 ಸೌತ್ ಬರೋ ಆಯೋಗದ ಮುಂದೆ ಅಂಬೇಡ್ಕರ್ ಅವರು ಅಸ್ಪಶ್ಯರಿಗೂ ಮತದಾನ ಹಕ್ಕನ್ನು ಕಲ್ಪಿಸುವಂತೆ ಶಿಾರಸು ಮಂಡಿಸಿದ್ದರು. ಆಗ ಅಸ್ಪಶ್ಯರಿಗೆ ತಿಳಿವಳಿಕೆ ಇಲ್ಲ ಅವರಿಗೆ ಮತದಾನದ ಹಕ್ಕುಗಳನ್ನು ನೀಡಬಾರದೆಂದು ಮಹಾತ್ಮ ಗಾಂಧಿ ವಿರೋಧಿಸಿದ್ದರು. ಈ ಕುರಿತು ಮಾಹಿತಿ ಬಹಿರಂಗಕ್ಕೆ ಪ್ರಿಯಾಂಕ್ ರ್ಖಗೆ ಪತ್ರ ಬರೆಯಲಿಲ್ಲ ಯಾಕೆ? 1961ರಲ್ಲಿ ಅಂದಿನ ಪ್ರಧಾನಿ ನೆಹರೂರವರು ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಮೀಸಲಾತಿಯನ್ನು ನಾನು ವಿರೋಧಿಸುತ್ತೇನೆ. ನೀವು ಕೂಡಾ ಜಾತಿಯಾದಾರಿತ ಮೀಸಲಾತಿಗೆ ಬೆಂಬಲಿಸಬೇಡಿ ಮತ್ತು ನಿಮ್ಮ ರಾಜ್ಯಗಳು ಮೀಸಲಾತಿ ಜಾರಿಮಾಡಬೇಡಿ ಎಂದು ಪತ್ರ ಬರೆದಿದ್ದಾರೆ. ನೆಹರೂರವರ ಪತ್ರಗಳು 1947 ರಿಂದ 1964 ಸಂಪುಟ 5ರ ಪುಟ 456 ಮತ್ತು 457 ರಲ್ಲಿದೆ ಆಕ್ಸಪರ್ಡ್ ವಿವಿನಲ್ಲಿ ಈ ಪುಸ್ತಕ ಪ್ರಕಟಗೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ಹೆಕಮಾಂಡಿಗೆ ಪ್ರಿಯಾಂಕ್ ರ್ಖಗೆ ಪತ್ರ ಬರೆಯಲಿಲ್ಲ ಯಾಕೆ ? ಎಂದು ಅನೇಕ ಪ್ರಶ್ನೆಗಳ ಸುರಿಮಳೆಗೈದರು.
ರಾಜ್ಯ ಸರ್ಕಾರ ತಮ್ಮ ಆಡಳಿತ ವೈಲ್ಯ ಮುಚ್ಚಿಕೊಳ್ಳಲು ಆರ್ಎಸ್ಎಸ್ ನಿಷೇಧದ ವಿಚಾರ ಮುನ್ನೆಲೆಗೆ ತಂದಿದೆ. ಪ್ರಿಯಾಂಕ್ ರ್ಖಗೆ ಅವರ ತಾಳಕ್ಕೆ ಕುಣಿಯುತ್ತಾ ಸಾರ್ವಜನಿಕವಾಗಿ ಸರ್ಕಾರ ಮುಜುಗರಕ್ಕೆ ಒಳಗಾಗಿದ್ದು, ಕೂಡಲೇ ರ್ಖಗೆ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋರ್ಚಾ ಮುಖಂಡರಾದ ಶಿವಾನಂದ ಟವಳಿ, ಬಸವರಾಜ ಹೆಬ್ಬಳ್ಳಿ, ನಾಗರಾಜ ನಾರಾಯಣಕರ, ಸುರೇಶ್ ಲಮಾಣಿ, ನಾಗಪ್ಪ ಮಾದರ ಮತ್ತಿತರರು ಇದ್ದರು.
ಬಾಗಲಕೋಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿದರು. ಶಿವಾನಂದ ಟವಳಿ, ಬಸವರಾಜ ಹೆಬ್ಬಳ್ಳಿ, ನಾಗರಾಜ ನಾರಾಯಣಕರ ಮತ್ತಿತರರು ಇದ್ದರು.