ಪ್ರಿಯಾಂಕ್​ ಖರ್ಗೆಗೂ ಕರೊನಾ ಸೋಂಕು

priyank kharge (1)
Published on

ಬೆಂಗಳೂರು: ದೇಶ ಮಾತ್ರವಲ್ಲದೆ ರಾಜ್ಯ ರಾಜಕಾರಣಕ್ಕೂ ಕರೊನಾ ಬಿಸಿ ತಟ್ಟಿದ್ದು, ಒಬ್ಬರಾದ ಮೇಲೊಬ್ಬರಂತೆ ರಾಜಕಾರಣಿಗಳೂ ಸೋಂಕಿತರಾಗುತ್ತಿದ್ದಾರೆ. ಇದೀಗ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

ನಾನು ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್​-19 ಟೆಸ್ಟ್ ವರದಿ ಇವತ್ತು ಪಾಸಿಟಿವ್ ಬಂದಿರುವುದರಿಂದ ಸೋಂಕು ದೃಢಪಟ್ಟಿದೆ. ಆದರೆ ಸದ್ಯ ನನಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಕರೊನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಇತ್ತೀಚೆಗೆ ನೇರ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತರಾಗಿ ಕೋವಿಡ್​-19 ಟೆಸ್ಟ್​ಗೆ ಒಳಗಾಗಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net