

ಕಲಬುರಗಿ: ಪ್ರವಾಹ ಪರಿಹಾರ ಸೇರಿದಂತೆ ಎಲ್ಲವನ್ನು ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿನೇ ನೀಡಬೇಕು, ಮಾತಾಡಬೇಕು ಎಂದರೆ ಮೋದಿ ಹಾಗೂ ಶಾ ಅವರನ್ನು ಕತ್ತೆ ಕಾಯಲು ಆಯ್ಕೆ ಮಾಡಿ ಕಳಿಸಲಾಗಿದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯದಮವರೊಂದಿಗೆ ಆಮತನಾಡಿ, ಮಾತೆತ್ತಿದ್ದರೆ ವಿಶ್ವಗುರು, ದೇವರು, ಮಹಾನ್ ನಾಯಕ ಎಂದು ಕರೆಯುತ್ತಾರೆ. 12 ವರ್ಷಗಳಲ್ಲಿ ಕರ್ನಾಟಕಕ್ಕೆ ಅವರೇನು ಕೊಟ್ಟಿದ್ದಾರೆ, ಎಲ್ಲವೂ ವಿರೋಧ ಪಕ್ಷದವರೇ ಕೊಡಬೇಕಾ? ಪರಿಹಾರ ಕೊಡಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಘೋಷಣೆಗೆ ನಮಗೆ ಅಂಕಿ ಅಂಶ ಬೇಡ್ವಾ? ಅಂಕಿ ಅಂಶ ಇಲ್ಲದೇ ಪರಿಹಾರ ಬಿಡುಗಡೆ ಮಾಡೋಕ್ಕಾಗತ್ತಾ? ಜಂಟಿ ಸಮೀಕ್ಷೆ ಮುಗಿದ ಮೇಲೆ ಪರಿಹಾರ ಕೊಡುತ್ತೇವೆ ಎಂದರು.
ನಾನು ಮಂತ್ರಿ ಆದ ಮೇಲೆ ಬಿಜೆಪಿ ನಾಯಕರು ಕಲಬುರಗಿಗೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ಬಿಜೆಪಿಗೆ ಎಷ್ಟು ಸೀಟು ಬಂದಿದೆ.? ಅವರಿಂದ ನಾವು ಆಡಳಿತ ಮಾಡೋದು ಕಲಿಯಬೇಕಾ? ಎಂದು ಬಿಜೆಪಿ ವಿರುದ್ದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.