

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸಹಕಾರಿ ಬ್ಯಾಂಕ್‌ಗಳಲ್ಲಿ ಸ್ಥಳೀಯ ಸಿಬ್ಬಂದಿಗಳೇ ಇರುವುದರಿಂದ ಗ್ರಾಹಕರಿಗೆ ವ್ಯವಹಾರ ಸುಲಭವಾಗುತ್ತದೆ. ಸಹಕಾರಿ ಬ್ಯಾಂಕ್‌ಗಳ ಪಾರದರ್ಶಕ ವ್ಯವಹಾರ, ನಿಗದಿತ ಸಮಯದಲ್ಲಿ ಸಾಲ ಮರುಪಾವತಿಯಂತಹ ನಡೆಗಳಿಂದ ದೇಶದಲ್ಲಿ ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಮುನ್ನಡೆಯುತ್ತಿರುವ ಪ್ರಿಯದರ್ಶಿನಿ ಸೊಸೈಟಿಯ ಹತ್ತನೇ ಶಾಖೆ ಶೀಘ್ರ ಉದ್ಘಾಟನೆಗೊಳ್ಳುವಂತಾಗಲಿ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಹಳೆಯಂಗಡಿ ಮೂಲದ ಪ್ರಿಯದರ್ಶಿನಿ ಸೊಸೈಟಿಯ 4ನೇ ಶಾಖೆಯನ್ನು ಮೂಡುಬಿದಿರೆ ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿ ಶಾಖೆಯ ಪೀಠೋಪಕರಣಗಳಿಗೆ 2 ಲಕ್ಷ ರೂ. ಅನುದಾನ ಘೋಷಿಸಿದರು. ಸೊಸೈಟಿ ವತಿಯಿಂದ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಅರಮನೆಯ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ನಗರ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ ಓನಿಲ್ ಡಿಸೋಜ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಚೌಟರ ಅರಮನೆಯ ಕುಲದೀಪ ಎಂ., ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕ್ರಿಸ್ತ ಶಾಂತಿ ಚರ್ಚ್‌ನ ಸಂತೋಷ್ ಕುಮಾರ್, ಶ್ರೀಕ್ಷೇತ್ರ ಪಾವಂಜೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂರ್ಯಕುಮಾರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಚಿತ್ತರಂಜನ್ ಬೋಳಾರ್, ವಕೀಲ ಶರತ್ ಶೆಟ್ಟಿ, ಮೂಡಾದ ಹರ್ಷವರ್ಧನ ಪಡಿವಾಳ್, ಪುರಸಭೆ ಸದಸ್ಯರಾದ ಪುರಂದರ ದೇವಾಡಿಗ, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ಪ್ರವೀಣ್ ಕುಮಾರ್, ಕುಮಾರ್ ಪೂಜಾರಿ, ಪುರಂದರ ದೇವಾಡಿಗ, ದೇವದಾಸ್ ಭಟ್ ಮುಖ್ಯ ಅತಿಥಿಯಾಗಿದ್ದರು.
ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕ ಅಭಿಷ್ಮಾ ಜೈನ್, ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ತನುಜಾ ಶೆಟ್ಟಿ, ಶರತ್ ಶೆಟ್ಟಿ, ಉಮಾನಾಥ ಕೆ.ಶೆಟ್ಟಿಗಾರ್, ಜೈಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನರಾಜ್ ಕೋಟ್ಯಾನ್, ಮಿರ್ಜಾ ಅಹಮ್ಮದ್, ಶೆರಿಲ್ ಅಯೋನ ಐಮನ್, ಹರೀಶ್ ಎನ್.ಪುತ್ರನ್, ನವೀನ್ ಸಾಲ್ಯಾನ್ ಪಂಜ, ಸಂದೀಪ್, ವಿಜಯ ಕುಮಾರ್ ಸನಿಲ್ ಉಪಸ್ಥಿತರಿದ್ದರು. ಅಕ್ಷತಾ ಎಂ.ಶೆಟ್ಟಿ, ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.