ಸವಲತ್ತುಗಳು ಸದುಪಯೋಗವಾಗಲಿ

6
ಮನ್ನಿಕೇರಿ ಗ್ರಾಮದಲ್ಲಿ ಬಯಲು ರಂಗಮಂದಿರ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೂಮಿಪೂಜೆ ನೆರವೇರಿಸಿದರು. ಈರಪ್ಪ ನಾಯ್ಕರ, ಮುತ್ತೆಪ್ಪ ನಾಂವಿ, ಮಹಾಂತೇಶ ದಳವಾಯಿ, ಲಕ್ಷ್ಮಣ ಗಡಾದ ಇತರರಿದ್ದರು.
Published on

ಕುಲಗೋಡ: ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರವಿರಬೇಕು. ಪರಸ್ಪರ ಸಹಕಾರ ಮನೋಭಾವದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗೋಕಾಕ ತಾಲೂಕಿನ ಮನ್ನಿಕೇರಿ ಗ್ರಾಮದ ಅಗಸಿ ಒಣಿಯಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವದ್ದಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು. ಈರಪ್ಪ ನಾಯ್ಕರ, ಮುತ್ತೆಪ್ಪ ನಾಂವಿ, ಮಹಾಂತೇಶ ದಳವಾಯಿ, ಲಕ್ಷ್ಮಣ ಗಡಾದ, ಕಲ್ಲೋಳೆಪ್ಪ ದಾಸರ, ಬಸವರಾಜ ಅಂಗಡಿ, ಯಲ್ಲಪ್ಪ ನಾಯ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net