ಖಾಸಗಿ ಶಾಲೆಗಳು ಕನ್ನಡ ನಾಮಫಲಕ ಹಾಕಲಿ

ಶ್ರೀರಂಗಪಟ್ಟಣದ ಗುರುಭವನದ ಕೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಇಒ ಸಮ್ಮುಖದಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿದರು. ಮಹೇಶ್, ಶಿವಕುಮಾರ್, ರಮೇಶ್ ಇತರರು ಇದ್ದರು.
ಶ್ರೀರಂಗಪಟ್ಟಣದ ಗುರುಭವನದ ಕೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಇಒ ಸಮ್ಮುಖದಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿದರು. ಮಹೇಶ್, ಶಿವಕುಮಾರ್, ರಮೇಶ್ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಖಾಸಗಿ ಶಾಲೆಗಳ ನಾಮಫಲಕ ಹಾಗೂ ಅವರ ಶಾಲಾ ವಾಹನಗಳ ಮುಂಭಾಗ ಕನ್ನಡ ಅಕ್ಷರಗಳಲ್ಲೇ ನಾಮಾಂಕಿತವನ್ನು ಹಾಕಿಸಬೇಕು ಎಂದು ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಒತ್ತಾಯಿಸಿದರು.

ಪಟ್ಟಣದ ಗುರುಭವನದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಸಮ್ಮುಖದಲ್ಲಿ ವಿವಿಧ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟು, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ಒಂದಷ್ಟು ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳು ಹಾಗೂ ಅವುಗಳ ಶಾಲಾ ಬಸ್‌ಗಳಲ್ಲಿ ಕನ್ನಡ ಬಳಕೆಯಾಗಿದೆ. ಆದರೆ ಇನ್ನಷ್ಟು ಶಾಲೆಗಳಲ್ಲಿ ಇವುಗಳ ಬಳಕೆಗೆ ತಾತ್ಸಾರ ತೋರಿ ಕನ್ನಡ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಒಂದಷ್ಟು ಸಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ತೆರಳಿ ಮನವಿ ನೀಡಲಾಗಿದ್ದು, ಮಾತೃ ಭಾಷೆ ಕನ್ನಡ ಬಳಕೆಗೆ ಮಾನ್ಯತೆಗಾಗಿ ಮನವಿ ಮಾಡಲಾಗಿದೆ. ಈ ಮನವಿಗೆ ಸ್ಪಂದಿಸಿ ಎಲ್ಲರೂ ಕೆಲವು ದಿನಗಳೊಳಗಾಗಿ ಕನ್ನಡ ನಾಮಫಲಕವನ್ನು ತಮ್ಮ ವಾಹನದ ಮುಂದಿನ ಗಾಜುಗಳಲ್ಲಿ ಹಾಕಿಸಿಕೊಳ್ಳಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಈ ಬಗ್ಗೆ ಮರವೇ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಬಿಇಒ ಆರ್.ಪಿ.ಮಹೇಶ್ ಮಾತನಾಡಿದರು. ಸಭೆಯಲ್ಲಿ ಸಿಆರ್‌ಪಿ ಶಿವಕುಮಾರ್, ಬಿಆರ್‌ಪಿ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net