

ಮಾನ್ವಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಿವನಗೌಡಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪೋತ್ನಾಳ ಖಾಸಗಿ ಶಾಲೆಯ ಆಡಳಿತ ಮಂಡಳಿ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಜನಪರ ಸಂಘಟನೆಗಳ ಮುಖಂಡರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿ, ತಹಸೀಲ್ದಾರ್ ರಾಜು ಪಿರಂಗಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ! ಸೆಕೆಂಡ್ಗಳಲ್ಲಿ ನಿಮ್ಮ ಖಾಸಗಿ ಡೇಟಾ ಕದಿಯುತ್ತೆ ಈ ವೈರಸ್, ಈಗಲೇ ಡಿಲೀಟ್ ಮಾಡಿ | SparkCatಪೋತ್ನಾಳ ಗ್ರಾಮದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಅಭ್ಯಾಸ ಮಾಡುತ್ತಿರುವ 7ವರ್ಷದ ವಿದ್ಯಾರ್ಥಿನಿಯನ್ನು ಪಾಲಕರ ಅನುಮತಿ ಇಲ್ಲದೆ ಅರೋಪಿ ಶಿವನಗೌಡರೊಂದಿಗೆ ಕಳುಹಿಸಿರುವುದು ಸರಿಯಲ್ಲ, ಖಾಸಗಿ ಶಾಲೆ ಪರವಾನಿಗೆ ರದ್ದು ಪಡಿಸಬೇಕು ಹಾಗೂ ಶಾಲೆ ಆಡಳಿತ ಮಂಡಳಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು.
ಅತ್ಯಾಚಾರಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಭವಿಷ್ಯದ ದೃಷ್ಠಿಯಿಂದ ಖಾಸಗಿ ಶಿಕ್ಷಣ ಸಂಸ್ಥೆ 25ಲಕ್ಷ ರೂ. ಪರಿಹಾರ ನೀಡಬೇಕು, ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ. ಪರಿಹಾರ ನೀಡಬೇಕು, ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರಕ್ಷಣೆ ಭದ್ರತೆ ಇಲ್ಲಾದ ಕಾರಣ ಪಾಲಕರು ಅತಂಕ ಪಡುವಂತಾಗಿದೆ, ಪಟ್ಟಣದ ಲೋಯೊಲಾ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಅಪಘಾತಕ್ಕೆ ಸಂಭಂಧಿಸಿದಂತೆ ಇದುವರೆಗೂ ಸಂಸ್ಥೆ ಮೇಲೆ ಪ್ರಕರಣ ದಾಖಲಿಸದೆ ಇರುವುದು ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮೇಲೆ ಅನುಮಾನ ಮೂಡಿಸುವಂತಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಭೀಮಸೇನೆ ಕರ್ನಾಟಕ ರಾಜ್ಯಾ ಕಾರ್ಯದರ್ಶಿ ಪ್ರಶಾಂತ ಜಗೀರ ಪನ್ನೂರು, ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಜಾವೇದಖಾನ್, ಪ್ರಮುಖರಾದ ಹೊಳೆಯಪ್ಪ ಉಟಕನೂರು, ಚಂದ್ರ ಜಗ್ಲಿ, ಪಂಪಾಪತಿ ಹಡಪದ್, ಲಕ್ಷ್ಮಣ ಜಾನೇಕಲ್, ಯಲ್ಲಪ್ಪ ಉಟಕನೂರ ಇತರರಿದ್ದರು.