ಖಾಸಗಿ ಶಾಲೆಗೂ ಸರ್ಕಾರದ ಸೌಲಭ್ಯ

28 MANVI 01
ಮಾನ್ವಿಯಲ್ಲಿ ಉತ್ತಮ ಶಿಕ್ಷಕರನ್ನು ಸಚಿವ ಎನ್‌ಎಸ್ ಬೋಸರಾಜು ಸನ್ಮಾನಿಸಿದರು. ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ತಿಪ್ಪಣ್ಣ ಬಾಗಲವಾಡ ,ಅಬ್ದುಲ್ ಗಪೂರ್‌ಸಾಬ್, ಬಾಲಸ್ವಾಮಿ ಕೊಡ್ಲಿ, ರಾಜಾ ಸುಭಾಷಚಂದ್ರ ನಾಯಕ, ಶರಣಪ್ಪ ಗುಡದಿನ್ನಿ, ರಾಮಲಿಂಗಪ್ಪ ಇತರರಿದ್ದರು.
Published on

ಮಾನ್ವಿ: ಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆಗಳನ್ನು ಗುರುತಿಸಿ ಅನುದಾನಿತ ಶಾಲೆಯಾಗಿಸುವುದಕ್ಕೆ ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಗಾಂಧಿ ಕಾಲೇಜು ಸಭಾಂಗಣದಲ್ಲಿ ಶನಿವಾರ ತಾಲೂಕು ಖಾಸಗಿ ಕಾಲೇಜುಗಳ ಅಡಳಿತ ಮಂಡಳಿಗಳ ಒಕ್ಕೂಟ ಹಾಗೂ ಉಪನ್ಯಾಸಕರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿಸ್ತರಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ತಾಲೂಕು ಖಾಸಗಿ ಕಾಲೇಜು ಅಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಪಿ.ತಿಪ್ಪಣ್ಣ ಬಾಗಲವಾಡ ಮಾತನಾಡಿ, ಖಾಸಗಿ ಶಾಲೆ ಮತ್ತು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ ಇಲಾಖೆ ಪರವಾನಗಿ ನೀಡುವ ಸಮಯದಲ್ಲಿ ಅಗ್ನಿ ಸುರಕ್ಷೆ ಪ್ರಮಾಣ ಪತ್ರ ಕೇಳುತ್ತಿದ್ದು, ಪ್ರಮಾಣ ಪತ್ರ ಪಡೆಯುವ ನಿಯಮಗಳಿಂದ ತೊಂದರೆಯಾಗುತ್ತಿರುವುದರಿಂದ ನಿಯಮ ಸಡಿಲಿಕೆ ಮಾಡಬೇಕು ಹಾಗೂ ಕಕ ಮಂಡಳಿ ವತಿಯಿಂದ ಖಾಸಗಿ ಕಾಲೇಜು-ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದಕ್ಕೆ ಅನುದಾನ ನೀಡಬೇಕು ಎಂದರು.

ಉಪನ್ಯಾಸಕಿ ಚಂದ್ರಕಲಾ ಪ್ರಕಾಶ ವಿಶೇಷ ಉಪನ್ಯಾಸ ನೀಡಿದರು. ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಕಾಲೇಜುಗಳ ಉಪನ್ಯಾಸಕರಿಗೆ ಉತ್ತಮ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಮುಖರಾದ ಮನೋಜ ಮಿಶ್ರಾ, ಸುಜಾತಾ, ಸೈಯದ್ ಖಾಲಿದ್ ಖಾದ್ರಿ, ಕೆ.ಈ. ನರಸಿಂಹ, ಮೌನೇಶಗೌಡ ಹರೆಟನೂರು, ಖಾಸಗಿ ಕಾಲೇಜು ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಆಂಜನೇಯ ನಸ್ಲಪುರ, ಈರಣ್ಣ ಮರ್ಲಟ್ಟಿ, ಶರಣಬಸವ ಸೀಕಲ್, ಮಹಾಂತೇಶ ಒಲೇಕಾರ, ವೀರಭದ್ರಯ್ಯಸ್ವಾಮಿ, ಮೆಹಬೂಬ್ ಮದ್ಲಾಪುರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net