ಖಾಸಗಿ ಶಾಲಾ ಬಸ್​ ಹರಿದು ವೃದ್ಧ ಸಾವು

Crime Logo
Published on

ರಾಣೆಬೆನ್ನೂರ: ಖಾಸಗಿ ಶಾಲಾ ಬಸ್​ವೊಂದು ವೃದ್ಧನ ಮೇಲೆ ಹರಿದ ಪರಿಣಾಮ ವೃದ್ಧ ಸ್ಥಳದಲ್ಲಿಯೆ ಮೃತಪಟ್ಟ ಟನೆ ತಾಲೂಕಿನ ಗುಡಗೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ನಾಗಪ್ಪ ವೆಂಕಪ್ಪ ಕೆಂಚರೆಡ್ಡಿ (70) ಮೃತ ವೃದ್ಧ.

ಜ್ಞಾನಜ್ಯೋತಿ ಖಾಸಗಿ ಶಾಲೆಗೆ ಸೇರಿದ ಬಸ್​ ಮಕ್ಕಳನ್ನು ಹತ್ತಿಸಿಕೊಂಡು ಬರುತ್ತಿದ್ದ ಸಮಯದಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆದ ಆತನ ಮೇಲೆ ಹರಿದಿದೆ. ಇದರಿಂದ ವೃದ್ಧನ ದೇಹ ಛಿದ್ರವಾಗಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net