ಹಾವೇರಿ: ಖಾಸಗಿ ಫೈನಾನ್ಸ್‌ವೊಂದರಲ್ಲಿ ಟ್ರಾೃಕ್ಟರ್ ಸಾಲ ಪಡೆದಿದ್ದ ಬ್ಯಾಡಗಿ ತಾಲೂಕಿನ ರೈತರೊಬ್ಬರ ದಾಖಲೆಗಳನ್ನೇ ಬಳಸಿಕೊಂಡು ಅವರಿಗೆ ಗೊತ್ತಾಗದಂತೆ ಅವರ ಹೆಸರಲ್ಲಿ ಪುಣೆಯ ಬ್ಯಾಂಕ್‌ವೊಂದರಲ್ಲಿ 2.64 ಲಕ್ಷ ರೂ. ಸಾಲ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಡಗಿ ತಾಲೂಕು ಹನುಮಂತಪ್ಪ ಲಮಾಣಿಗೆ ಖಾಸಗಿ ಫೈನಾನ್ಸ್ ವಂಚಿಸಿರುವ ಆರೋಪ ಕೇಳಿ ಬಂದಿದೆ. ಹನುಮಂತಪ್ಪ ಹಾವೇರಿಯ ಖಾಸಗಿ ಫೈನಾನ್ಸ್‌ವೊಂದರಲ್ಲಿ 3 ಲಕ್ಷ ರೂ. ಟ್ರಾೃಕ್ಟರ್ ಸಾಲ ಪಡೆದಿದ್ದರು. ಈತನಿಂದ ದಾಖಲೆಗಳನ್ನು ಪಡೆದಿದ್ದ ಫೈನಾನ್ಸ್‌ನವರು ಈ ದಾಖಲೆಗಳನ್ನೇ ದುರ್ಬಳಕೆ ಮಾಡಿಕೊಂಡು ಈತನ ಹೆಸರಲ್ಲಿ ಪುಣೆಯ ಬ್ಯಾಂಕ್‌ವೊಂದರಲ್ಲಿ 2.64 ಲಕ್ಷ ರೂ. ಸಾಲ ಪಡೆದಿದ್ದಾರೆ. ಈತನಿಗೆ ಶೇ.34ರಷ್ಟು ಬಡ್ಡಿಯಂತೆ ಮೂರು ಲಕ್ಷ ಸಾಲ ಕೊಟ್ಟಿರುವ ಫೈನಾನ್ಸ್‌ನವರು, ಈತನ ಹೆಸರಲ್ಲಿ ಕೇವಲ ಶೇ.4ರಷ್ಟು ಬಡ್ಡಿಯಂತೆ ಬೆಳೆ ಸಾಲ ಪಡೆದಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ. ಬೆಳೆ ಸಾಲದ ಮಾಹಿತಿಗಾಗಿ ನಾನು ಬ್ಯಾಡಗಿಯ ಎಸ್‌ಬಿಐ ಬ್ಯಾಂಕ್‌ಗೆ ಹೋಗಿ ಸಿಬಿಲ್ ಪರೀಕ್ಷಿಸಿದಾಗ ಪುಣೆಯಲ್ಲಿ ಖಾಸಗಿ ಫೈನಾನ್ಸ್‌ನವರು ನನ್ನ ಹೆಸರಲ್ಲಿ 2.64 ಲಕ್ಷ ರೂ. ಸಾಲ ಪಡೆದಿರುವ ವಿಚಾರ ಗೊತ್ತಾಗಿದೆ. ಈ ಕುರಿತು ದೂರು ದಾಖಲಿಸುತ್ತೇನೆ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಹನುಮಂತಪ್ಪ ಲಮಾಣಿ ಒತ್ತಾಯಿಸಿದ್ದಾರೆ.
ಕೋಟ್:
ರೈತರು ಬ್ಯಾಂಕ್‌ಗೆ ಹೋಗಿ ಸಾಲ ಕೇಳಿದರೆ ಡ ಉತಾರ, ಇಸಿ, ಲೀಗಲ್ ಓಪಿನಿಯನ್ ಬೇಕು ಎಂದು ಅಲೆದಾಡಿಸುತ್ತಾರೆ. ಆದರೆ, ಈ ಖಾಸಗಿ ಫೈನಾನ್ಸ್‌ನವರು ರೈತ ಸಾಲಕ್ಕಾಗಿ ಕೊಟ್ಟಿದ್ದ ಆಧಾರ್ ಕಾರ್ಡ್ ಹಾಗೂ ಉತಾರದ ಮೇಲೆ ಆತನ ಅರಿವಿಗೆ ಬಾರದಂತೆ ಸಾಲ ತೆಗೆಸಿಕೊಂಡಿದ್ದಾರೆ. ಬ್ಯಾಂಕ್‌ನವರು ಫೈನಾನ್ಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಲ್ಲಿ ದೊಡ್ಡ ಮೋಸ ನಡೆದಿದ್ದು, ಅಮಾಯಕ ರೈತರಿಗೆ ಈ ರೀತಿ ಮೋಸ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ