ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಳ್ಳಿ: ಉಪನ್ಯಾಸಕರ ಒಕ್ಕೂಟದಿಂದ ತಹಸೀಲ್ದಾರ್‌ಗೆ ಮನವಿ

080920 Sindhanur Private College Lecturer's
ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಸೇವೆಗೆ ನೇಮಿಸಿಕೊಂಡು ವೇತನ ನೀಡಬೇಕೆಂದು ಒತ್ತಾಯಿಸಿ ಖಾಸಗಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Published on

ಸಿಂಧನೂರು: ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಸೇವೆಗೆ ನೇಮಿಸಿಕೊಂಡು ವೇತನ ನೀಡಬೇಕು ಎಂದು ಒತ್ತಾಯಿಸಿ ಖಾಸಗಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟದಿಂದ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸರ್ಕಾರ ಲಾಕ್‌ಡೌನ್ ಸಡಿಲಿಸಿ ಶಾಲಾ-ಕಾಲೇಜುಗಳನ್ನು ತೆರೆಯಲು ಅನುಮತಿಸಿದ ನಂತರ ಆ.1ರಿಂದ ಕಾಲೇಜು ಆಡಳಿತ ಮಂಡಳಿಗಳು ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಪ್ರವೇಶ ನೀಡುತ್ತಿವೆ. ವಿದ್ಯಾರ್ಥಿಗಳಿಂದ ಪಡೆಯುವ ಮೊದಲ ಕಂತಿನ ಶುಲ್ಕ ಉಪನ್ಯಾಸಕರ ವೇತನಕ್ಕೆ ಬಳಸಬೇಕೆಂದು ಸೂಚಿಸಿದೆ.

ಆರು ತಿಂಗಳಿಂದ ಕೆಲಸ ಮತ್ತು ವೇತನ ಇಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿರುವ ಉಪನ್ಯಾಸಕರಿಗೆ ಬಹುಪಾಲು ಕಾಲೇಜುಗಳು ಕನಿಷ್ಠ ವೇತನ ನೀಡಿಲ್ಲ. ಸರ್ಕಾರದ ಸೂಚನೆ ಉಲ್ಲಂಘನೆಯಾಗಿದೆ. ಸಂಸ್ಥೆಗಳಲ್ಲಿ ದುಡಿಯುತ್ತಿರುವ ಉಪನ್ಯಾಸಕರಿಗೆ ಆಡಳಿತ ಮಂಡಳಿಗಳು ಸೇವೆ ಮುಂದುವರಿಸಬೇಕು. ತಕ್ಷಣ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಖಾಸಗಿ ಕಾಲೇಜುಗಳ ಉಪನ್ಯಾಸಕರು ಮತ್ತು ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಲಾಯಿತು.

ಡಾ.ಬಸವರಾಜ ಪಿ.ನಾಯಕ, ಡಾ.ಮರಿಲಿಂಗಪ್ಪ, ತಿರುಪತಿ ವಡ್ಕಿ, ಚಂದ್ರಶೇಖರ ಗೊರೇಬಾಳ, ಶಂಕರ ವಾಲಿಕಾರ, ಮಹಾದೇವ, ನೀಲಕಂಠಪ್ಪ, ಸೂರ್ಯನಾರಾಯಣ, ಶಿವಪುತ್ರಪ್ಪ, ಬಸವರಾಜ, ರಾಮಣ್ಣ ಹಿರೇಬೇರ‌್ಗಿ, ಹನುಮಂತರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net