ಖಾಸಗಿ ಬಸ್ ಪಲ್ಟಿ, 45 ಮಕ್ಕಳಿಗೆ ಗಾಯ

BUS
Published on

ದಾಂಡೇಲಿ: ಗಣೇಶಗುಡಿಗೆ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರಿಗೆ ಉರುಳಿ ಬಿದ್ದ ಪರಿಣಾಮ ಬಸ್​ನಲ್ಲಿದ್ದ 45 ಶಾಲಾ ಮಕ್ಕಳು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಗಣೇಶಗುಡಿಯಲ್ಲಿ ಜಲಕ್ರೀಡೆ ಮುಗಿಸಿಕೊಂಡು ದಾಂಡೇಲಿಗೆ ವಾಪಸ್ ಬರುತ್ತಿದ್ದಾಗ ಎದುರಿಗೆ ಬಂದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ತಪ್ಪಿಸಲು ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿದ ಬಸ್ ಪಕ್ಕದ ಗಟಾರಿಗೆ ಉರುಳಿ ಬಿದ್ದಿತು. 45 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ ಸೇಂಟ್ ಆಂಥೋನಿ ಹೈಸ್ಕೂಲ್​ನ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಘಟನೆ ನಡೆಯುತ್ತಿದ್ದಂತೆ ಪಕ್ಕದಲ್ಲಿನ ರೆಸಾರ್ಟ್​ನವರು ಹಾಗೂ ಸ್ಥಳೀಯರು ಬಸ್​ನಲ್ಲಿದ್ದ ಮಕ್ಕಳನ್ನು ಎರಡು ಆಂಬುಲೆನ್ಸ್ ಗಳ ಮೂಲಕ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ಏರ್ಪಾಟು ಮಾಡಿದರು. ರಾಮನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net