ಖುಷಿಯಾಗಿ ಮಗಳನ್ನು ನೋಡಲು ಹೋಗುತ್ತಿದ್ದ ದಂಪತಿಯನ್ನು ಬಲಿ ಪಡೆದ ಖಾಸಗಿ ಬಸ್

9cmy7-1.jpg
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದ ಬಳಿ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚನ್ನಹಳ್ಳಿ ಗ್ರಾಮದ ನಿವಾಸಿ ಕಟ್ಟಡ ಗುತ್ತಿಗೆದಾರ ಸಿ.ಎನ್.ಚಂದ್ರಪ್ಪ ಮತ್ತು ಈತನ  ಬೇಬಿ (40) ಮೃತರು.
ಮೊದಲನೇ ಮಗಳು ಕಲ್ಪನಾರನ್ನು ಚಿಂತಾಮಣಿ ತಾಲ್ಲೂಕಿನ ಹಿರಣ್ಯಹಳ್ಳಿ ಗ್ರಾಮದ ಸುರೇಶ್ ರವರಿಗೆ ಕೊಟ್ಟು ಮದುವೆ ಮಾಡಿದ್ದು ಮಗಳನ್ನು ನೋಡಲು  ಚಿಂತಾಮಣಿಗೆ ಬಂದಿದ್ದು ಇಲ್ಲಿನ ಮಾರುಕಟ್ಟೆಯಲ್ಲಿ  ಹೂವು, ಹಣ್ಣು ಸಿಹಿ ತಿಂಡಿಗಳನ್ನು ತೆಗೆದುಕೊಂಡು ಮುರಗಮಲ್ಲಾ ರಸ್ತೆಯಲ್ಲಿರುವ ಹಿರಣ್ಯ ಹಳ್ಳಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮುರುಗಮಲ್ಲಾ-ಬೆಂಗಳೂರು ಮಾರ್ಗದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಆಯತಪ್ಪಿ ರಸ್ತೆಯ ಒಂದು ಬದಿಗೆ ಬಿದ್ದರೆ, ದಂಪತಿ ರಸ್ತೆಯ ಮತ್ತೊಂದು ಬದಿಗೆ ಬಿದ್ದಿದ್ದಾರೆ. ಇದೇ ವೇಳೆ ಬಸ್‌ನ ಚಕ್ರಗಳು  ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಇನ್ನು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net