ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಖಾಸಗಿ ಬಸ್ ದರ ಏರಿಕೆ

Bus-2
Published on

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಫೆ.20 ರಿಂದ ಏರಿಕೆ ಮಾಡಲು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ನಿರ್ಧರಿಸಿದೆ.

ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ಕೆ. ಶಿವಲಿಂಗು ಹಾಗೂ ಚಾಮರಾಜನಗರ ಜಿಲ್ಲಾ ಸಂಘದ ಅಧ್ಯಕ್ಷ ಅನ್ವರ್ ಪಾಷ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡ ಸಭೆಯಲ್ಲಿ ದರ ಏರಿಕೆಯ ತೀರ್ಮಾನ ಮಾಡಲಾಯಿತು. ಡೀಸೆಲ್ ಹಾಗೂ ಬಸ್‌ಗಳ ಬಿಡಿ ಭಾಗಗಳ ದರ ಏರಿಕೆ, ಇನ್ಸೂರೆನ್ಸ್ ಹಾಗೂ ಟೋಲ್ ಹೆಚ್ಚಳದಿಂದ ಬಸ್ ದರ ಏರಿಕೆ ಮಾಡಲು ನಿರ್ಧರಿಸಲಾಯಿತು.

ಪರಿಷ್ಕೃತ ದರ: ಮೈಸೂರು-ತಿ.ನರಸೀಪುರ 40 ರೂ., ಮೈಸೂರು-ಕೊಳ್ಳೆಗಾಲ 75 ರೂ., ಮೈಸೂರು-ಚಾಮರಾಜನಗರ 75 ರೂ., ಮೈಸೂರು- ಯಳಂದೂರು 60 ರೂ., ಕೊಳ್ಳೇಗಾಲ- ತಿ.ನರಸೀಪುರ 40 ರೂ., ಮೈಸೂರು-ಸಂತೆಮರಹಳ್ಳಿ 60 ರೂ., ಮೈಸೂರು-ಮಲೆಮಹದೇಶ್ವರಬೆಟ್ಟ 180 ರೂ., ಕೊಳ್ಳೇಗಾಲ- ಮಹದೇಶ್ವರಬೆಟ್ಟ 110 ರೂ., ತಿ.ನರಸೀಪುರ-ನಂಜನಗೂಡು 35 ರೂ., ಕೊಳ್ಳೇಗಾಲ ಮತ್ತು ಚಾಮರಾಜನಗರ ನಡುವಿನ ಸಂಚಾರ ದರವನ್ನು 40 ರೂ. ಪರಿಷ್ಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net