

ವಿಜಯವಾಣಿ ಸುದ್ದಿಜಾಲ ಧಾರವಾಡ
ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರ ಹೊರವಲಯದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಉಡುಪಿ ಬೈಕಾಡಿಯ ರವಿರಾಜ ಮೃತ ಚಾಲಕ. ಮುಂಬೈನಿ0ದ ಮಂಗಳೂರಿಗೆ ಖಾಸಗಿ ಬಸ್ ಚಲಾಯಿಸುತ್ತಿದ್ದ ರವಿರಾಜ ಬೆಳಗಿನ ಜಾವ 2.30ರ ಸುಮಾರಿಗೆ ಅಸ್ವಸ್ಥಗೊಂಡಿದ್ದರು. ರಸ್ತೆ ಪಕ್ಕ ಬಸ್ ನಿಲ್ಲಿಸಿ ಇನ್ನೊಬ್ಬ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ರವಿರಾಜ ಬಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಹೃದಯಾಘಾತವಾಗುವ ಮೊದಲು ಬಸ್ ನಿಲ್ಲಿಸಿ ಸಮಯಪ್ರಜ್ಞೆ ಮೆರೆದ ರವಿರಾಜ ಅವರ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.