ಖಾಸಗಿ ಬಸ್ ಬೆಂಕಿಗಾಹುತಿ: ಕೂದಲೆಳೆ ಅಂತರದಲ್ಲಿ ೬೦ ಜನ ಪಾರು

WhatsApp Image 2023-09-11 at 6.48.23 AM
Published on

ವಿಜಯನಗರ: ಖಾಸಗಿ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ದಗದಗನೆ ಹೊತ್ತಿ ಉರಿದ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ರಾಷ್ಟಿçÃಯ ಹೆದ್ದಾರಿ ೫೦ ರಲ್ಲಿ ಸೋಮವಾರ ಬೆಳಗಿನಜಾವ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರಿ ಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ಹಟ್ಟಿಗೆ ಹೊರಟ್ಟಿದ್ದ ನಾಗಶ್ರೀ ಎಂಬ ಖಾಸಗಿ ಬಸ್‌ನಲ್ಲಿ ೬೦ ಜನ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ ೩.೩೦ ರ ಸುಮಾರಿಗೆ ಬಸ್‌ನ ಟೈರ್ ಸ್ಫೋಟಗೊಂಡಿರುವ ದೊಡ್ಡ ಶಬ್ದ ಹೊಮ್ಮುತ್ತಿದ್ದಂತೆ ಪ್ರಯಾಣಿಕರು ಎಚ್ಚರಗೊಂಡಿದ್ದಾರೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ತಕ್ಷಣ ಬಸ್‌ನಿಂದ ಇಳಿದು ಬಹು ದೂರಕ್ಕೆ ಓಡಿ ಹೋಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಲಗೇಜ್‌ಗಳು ಬೆಂಕಿಗಾಹುತಿ:
ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿAದ ಜನರು ತರಾತುರಿಯಲ್ಲಿ ಕೆಳಗಿಳಿದಿದ್ದರಿಂದ ಬಹುತೇಕರು ತಮ್ಮ ಲಗೇಜ್‌ಗಳನ್ನು ಅಲ್ಲೇ ಮರೆತಿದ್ದರು. ಬಸ್ ಬಹುತೇಕ ಸುಟ್ಟು ಕರಕಲಾಗಿದ್ದರಿಂದ ಪ್ರಯಾಕರು ಬಟ್ಟೆ, ದಾಖಲೆಗಳು, ಒಡವೆ ಸುಟ್ಟು ಭಸ್ಮಮವಾಗಿವೆ.

ಬಸ್‌ನಲ್ಲಿ ಸುರಕ್ಷತೆ ಕೊರತೆ:
ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಬಸ್‌ನಲ್ಲಿ ಯಾವುದೇ ರೀತಿಯ ಪರಿಕರಗಳು ಇರಲಿಲ್ಲ. ಹೀಗಾಗಿ ಬಸ್‌ನ ಚಾಲಕ ಮತ್ತು ನಿರ್ವಾಹಕರು ಅಸಹಾಯಕರಾಗಿ ನಿಂತಿದ್ದರು. ೧೧೨ಗೆ ಕರೆ ಮಾಡಿದಾಗ ಅದು ದೆಹಲಿಗೆ ಕನೆಕ್ಟ್ ಆಗಿತ್ತು. ಹಲವು ಬಾರಿ ಪ್ರಯತ್ನಿಸಿದ ಬಳಿಕ ಸ್ಥಳೀಯ ಪೊಲೀಸರ ಸಂಪರ್ಕ ಸಿಕ್ಕಿತ್ತು. ಬಳಿಕ ಅಗ್ನಿ ಶಾಮಕ ದಳದ ಎರಡು ವಾಹನಗಳು ಬಂದು ಬೆಂಕಿ ನಂದಿಸಿದವು. ಆದರೆ, ಅಷ್ಟರಲ್ಲಾಗಲೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಬಸ್ ನಲ್ಲಿ ಸುರಕ್ಷತಾ ಪರಿಕರಗಳ ಕೊರತೆಯೇ ಈ ಘಟನೆಗೆ ಕಾರಣವೆಂದು ಪ್ರಯಾಣಿಕರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net