

ಚಿತ್ರದುರ್ಗ: ನಗರದ ಹೊರವಲಯ ಮದಕರಿಪುರ ಸಮೀಪದ ಹೊಸ ಬೈಪಾಸ್ ಸೇತುವೆ ಮೇಲೆ ಶನಿವಾರ ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ್ದಿದ್ದು,ದುರ್ಘಟನೆಯಲ್ಲಿ ಬೈಕ್ ಸವಾರ ಅಸು ನೀಗಿದ್ದಾನೆ. ಮೃತನನ್ನು ಬಚ್ಚ ಬೋರನಹಟ್ಟಿಯ ನಿವಾಸಿ ರಮೇಶ್(32)ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ಒಂದು ಗಂಟೆಯ ಹೊತ್ತಿನಲ್ಲಿ ನಡೆದ ಈ ಅಪಘಾತದಿಂದಾಗಿ ಬಸ್ ಕೆಳ ಭಾಗದಲ್ಲಿ ಸಿಲುಕಿದ ಬೈಕ್‌ನ್ನು ಸ್ವಲ್ಪ ದೂರ ದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಟೈರ್‌ವೊಂದರಲ್ಲಿ ಕಾಣಿಸಿ ಬೆಂಕಿ ವ್ಯಾಪಕವಾಗಿ ಬಸ್ ಹೊತ್ತಿ ಉರಿಯಲಾರಂಭಿಸಿದೆ. ಅ ಪಾಯದ ಮುನ್ಸೂಚನೆ ಅರಿತ ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ತಕ್ಷಣ ಕೆಳಗೆ ಇಳಿದು ಪಾರಾಗಿದ್ದಾರೆ.
ಹೊಸಪೇಟೆ ಕಡೆಯಿಂದ ಬೆಂಗಳೂರಿಗೆ ಬಸ್ ತೆರಳುತ್ತಿದ್ದಾಗ ಅವಘಡವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿ ಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು,ಪ್ರಭಾರ ಅಡಿಷನಲ್ ಎಸ್ಪಿ ಉಮೇಶ್ ಈಶ್ವರ ನಾಯಕ ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ತಿಳಿಸಿದ್ದಾರೆ.