ಖಾಸಗಿ ಬಸ್ ಬೆಂಕಿಗೆ ಆಹುತಿ : 36 ಜನ ಪ್ರಯಾಣಿಕರು ಪಾರು *ಆಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಭಸ್ಮ

raichur
raichur
Published on

ರಾಯಚೂರು ಬೆಂಗಳೂರಿನಿಂದ ರಾಯಚೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ಸೊಂದು ಶುಕ್ರವಾರ ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಅನಂತಪುರು ಜಿಲ್ಲೆಯ ಹತ್ತಿರದ ಗಾರಲದಿನ್ನೆ ಬಳಿ ಬೆಂಕಿ ಹತ್ತಿ ಸುಟ್ಟು ಭಸ್ಮವಾಗಿದ್ದು, ಬಸ್‌ನಲ್ಲಿದ್ದ 32 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಅನಂತಪುರು ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಗ್ರೀನ್‌ಲೈನ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನಿಗೆ ಎಚ್ಚರಿಸಿದರೂ 1 ಕೀ.ಮಿವರೆಗೆ ನಿಲ್ಲಸಿದೇ ಮುಂದೆ ಬಂದಿದ್ದಾನೆ. ನಿದ್ದೆಯಲ್ಲಿ ಜನರು ತಡಬಡಿಸಿ ಚೀರಾಟ ನಡೆಸಿದಾಗ ವಾಹನ ನಿಲ್ಲಿಸಿದ್ದು ವಾಹನದಿಂದ ಕೆಳಗಿಳಿದ್ದಾರೆ.

ಪ್ರಯಾಣಿಕರು ಸುರಕ್ಷಿತರಾಗಿದ್ದರು ಅಪಾರ ಪ್ರಮಾಣದ ನಗದು ಹಣ, ದಾಖಲೆಗಳು, ವಿದ್ಯಾರ್ಥಿಗಳು ಲ್ಯಾಪಟ್ಯಾಪ್, ಮೊಬೈಲ್ ಫೋನ, ಬ್ಯಾಗ್‌ಗಳ, ವೈದ್ಯ ವಿದ್ಯಾರ್ಥಿಯೊಬ್ಬರು ಮೂಲ ದಾಖಲೆ ಸುಟ್ಟು ಹೋಗಿವೆ. 32 ಜನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು ಬಹುತೇಕರು ರಾಯಚೂರಿಗೆ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಕುರಿತು ಪ್ರಯಾಣಿಕರು ನೀಡಿದ ದೂರಿನ ಮೇರೆಗೆ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ರಾಯಚೂರಿಗೆ ಮಗಳೊಂದಿಗೆ ಆಗಮಿಸುತ್ತಿದ್ದಾಗ,ಬೆಳಗಿನ ಜಾವ 2.30 ಸಮಯದಲ್ಲಿ ಘಟನೆ ನಡೆದಿದೆ. ಪ್ರಯಾಣಿಕರನ್ನು ಎಬ್ಬಿಸಿ ಚಾಲಕನಿಗೆ ಮಾಹಿತಿ ನೀಡಲಾಯಿತು. ಆದರೂ ಚಾಲಕ ಸ್ಪಂದಿಸಿಲ್ಲ. ಚಾಲಕನಿಗೆ ಯಾವುದೇ ಮಾಹಿತಿ ಇರಲಿಲ್ಲ.ಬಸ್‌ನಲ್ಲಿದ್ದ ನಾಲ್ಕು ಐಫೋನ್‌ಗಳು, ಅನೇಕ ಲ್ಯಾಪ್‌ಟ್ಯಾಪ್‌ಗಳು,ಲಗೇಜು ಸುಟ್ಟುಹೋಗಿ ಲಕ್ಷಾಂತರ ನಷ್ಟವಾಗಿದೆ. ನಿರ್ಮಲ ಬೆಣ್ಣೆ ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net