ಖಾಸಗಿ ಬಸ್ ಡಿಕ್ಕಿ, ಬೈಕ್ ಸವಾರರಿಗೆ ಗಾಯ

7 smg 13
Published on

ಶಿವಮೊಗ್ಗ: ನಗರದ ಹೊಳೆ ಬಸ್ ನಿಲ್ದಾಣ ಸಮೀಪದ ತುಂಗಾನದಿ ಹೊಸ ಸೇತುವೆ ಮೇಲೆ ಬುಧವಾರ ರಾತ್ರಿ ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ.

ಚಿಕ್ಕಲ್ ಬಡಾವಣೆಯ ಯುವಕರು ಗಾಯಗೊಂಡವರು. ಇಬ್ಬರು ಹೊಳೆ ಬಸ್ ನಿಲ್ದಾಣದ ಕಡೆಯಿಂದ ವಾಹನ ಹಿಂದಿಕ್ಕುವಾಗ ಎದುರಿನಿಂದ ಬಸ್‌ಗೆ ಡಿಕ್ಕಿಯಾಗಿದ್ದು ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಅಪಘಾತದಿಂದ ಹೊಸ ಸೇತುವೆ ಮೇಲೆ ಕೆಲವೊತ್ತು ಟ್ರಾಫಿಕ್ ಟಾಮ್ ಉಂಟಾಗಿತ್ತು. ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಮೆಗ್ಗಾನ್‌ಗೆ ಸಾಗಿಸಿ ಟ್ರಾಫಿಕ್ ಜಾಮ್ ನಿವಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net