ಹೊಸ ಲುಕ್ ನಲ್ಲಿ ಪ್ರೀತಿ ಸಿಲ್ಕ್ಸ್,   ಹುಬ್ಬಳ್ಳಿಯಲ್ಲಿ ನವೀಕೃತ ಶೋರೂಂ ಪುನಾರಂಭ

IMG_20241009_204846_911-1.jpg
Published on

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಎಂದರೆ ಉತ್ತರ ಕರ್ನಾಟಕದ ಜವಳಿ ಹಬ್ ಆಗಿ ಪರಿವರ್ತನೆಯಾಗಿದೆ. ಕಳೆದ ಅನೇಕ ದಶಕಗಳಿಂದ ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ ಅಕ್ಕಪಕ್ಕದ ಅನೇಕ ಜಿಲ್ಲೆಗಳಿಂದಲೂ ಇಲ್ಲಿಗೆ ಜವಳಿ ಖರೀದಿಗೆ ಜನರು ಬರುತ್ತಾರೆ. ಇಂತಹ ಪಾರಂಪರಿಕ ಜವಳಿ ತಾಣದಲ್ಲಿ ದಶಕಗಳಿಂದ ಸೀರೆ ವ್ಯಾಪಾರ ಮಾಡುತ್ತಿರುವ ಪ್ರೀತಿ ಸಿಲ್ಕ್ ್ಸ ಅತ್ಯಾಧುನಿಕ ಸೌಲಭ್ಯಗಳ ನವೀಕೃತ ಶೋರೂಂ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ.

ನಗರದ ದಾಜಿಬಾನಪೇಟನಲ್ಲಿರುವ ಪ್ರೀತಿ ಸಿಲ್ಕ್ ್ಸ ಆರು ದಶಕಗಳಿಂದ ವ್ಯಾಪಾರೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದೆ. ವೈವಿಧ್ಯಮಯ ಸೀರೆಗಳಿಗೆ ಹೆಸರಾಗಿರುವ ಪ್ರೀತಿ ಸಿಲ್ಕ್ ನಲ್ಲಿ ದೇಶದ ವಿವಿಧ ಕಡೆಗಳ ವಿಶಿಷ್ಟ ಸೀರೆಗಳು, ಡಿಸೈನ್ಗಳು ಲಭ್ಯವಿದ್ದು, ಮಹಿಳೆಯರ ಗಮನ ಸೆಳೆಯುತ್ತಿವೆ.

ಕಾಂಚಿವರಂ, ಧರ್ಮಾವರಂ, ಬನಾರಸಿ, ಮೈಸೂರು ಸಿಲ್ಕ್, ಉಪಡಾ, ವಾಕಲಮ್, ಗದ್ವಾಲ್, ಪೈಟಣಿ, ಇಳಕಲ್ಲ, ಘಾಗ್ರಾ ಹಾಗೂ ಡಿಸೈನರ್ ಸಿಲ್ಕ್ ಹಾಗೂ ಫ್ಯಾನ್ಸಿ ಸಾರಿಗಳು ಮನಸೂರೆಗೊಳ್ಳುತ್ತವೆ. ಅತ್ಯಂತ ಕಡಿಮೆ ದರದಿಂದ ಹಿಡಿದು ದುಬಾರಿ ಸೀರೆಗಳು ಇಲ್ಲಿ ನೋಡಲು ಖರೀದಿ ಮಾಡಲು ಸಿಗುತ್ತವೆ.

ಗ್ರಾಹಕರ ಅಚ್ಚುಮೆಚ್ಚು:
ಮನೆಯಲ್ಲಿ ಮದುವೆ ಇರಲಿ, ಯಾವುದೇ ಸಭೆ, ಸಮಾರಂಭವೇ ಇರಲಿ ಹೆಚ್ಚಿನ ಗ್ರಾಹಕರು ಸೀರೆ ಖರೀದಿಗೆ ಇಷ್ಟ ಪಡುವುದು ಪ್ರೀತಿ ಸಿಲ್ಕ್ ್ಸಅನ್ನೇ. ಇದೀಗ ಇನ್ನಷ್ಟು ಅತ್ಯಾಕರ್ಷಕ ಲುಕ್ ಅಷ್ಟೇ ಅಲ್ಲ, ತರಹೇವಾರಿ ಡಿಸೈನ್ಗಳೊಂದಿಗೆ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಸಿಲ್ಕ್, ಕಾಟನ್, ಸಿಂಥೆಟಿಕ್ ಸೀರೆಗಳ ಭಂಡಾರವೇ ಇಲ್ಲಿದೆ. ಉತ್ತರ ಕರ್ನಾಟಕ, ದಣ ಮಹಾರಾಷ್ಟ್ರದಿಂದಲೂ ಹೆಚ್ಚಿನ ಗ್ರಾಹಕರು ಬರುತ್ತಾರೆ.

ನವೀಕರಣ:
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ ಪ್ರೀತಿ ಸಿಲ್ಕ್ ್ಸ ಮಳಿಗೆಗೆ ಹೊಸ ರೂಪ ನೀಡಲಾಗಿದೆ. ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟನೆ ನೆರವೇರಿಸಿದರು. ಭಂಡಾರಿ ಕುಟುಂಬದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net