ಪಥ್ವಿ ಸೆಂಟ್ರಲ್ ಶಾಲೆ ಸೇವೆ ಅಪಾರ

16YARAGATTI1
Published on

ಯರಗಟ್ಟಿ: ಹೆಣ್ಣು ಮಕ್ಕಳಿಂದು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದು, ಅವರನ್ನು ಗೌರವದಿಂದ ಕಂಡು ಶಿಕ್ಷಣ ನೀಡಿದರೆ ದೇಶಕ್ಕೆ ಕೀರ್ತಿ ತರುವ ಸಾಧಕಿಯಾಗುತ್ತಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಹಾದಿಮನಿ ಹೇಳಿದರು.

ಇಲ್ಲಿನ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಪೃಥ್ವಿ ಸೆಂಟ್ರಲ್ ಶಾಲೆಯಲ್ಲಿ ಭಾನುವಾರ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿಯೂ ಸಹ ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇವೆ ಆರಂಭಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿವೆ. ಅದರಲ್ಲೂ ಪಥ್ವಿ ಸೆಂಟ್ರಲ್ ಶಾಲೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಕಳ್ಳಿಗುದ್ದಿ ಮಾತನಾಡಿ, ಯಾವುದೇ ನಗರ ಪ್ರದೇಶಕ್ಕೆ ಕಡಿಮೆ ಇರದಂತೆ ನಮ್ಮ ಸಂಸ್ಥೆ ಪಟ್ಟಣದಲ್ಲಿ ಪ್ರಾರಂಭಿಸುವ ಮೂಲಕ ಪರಿಣತ ಶಿಕ್ಷಕರಿಂದ ಶಿಕ್ಷಣ ಕೊಡಿಸುವ ಕೆಲಸವಾಗುತ್ತಿದೆ ಎಂದರು. ಮುಖ್ಯಶಿಕ್ಷಕ ಬಸನಗೌಡ ಅಣ್ಣಗೇರಿ, ಸಂಸ್ಥೆ ಗೌರವಾಧ್ಯಕ್ಷ ಅಜಿತಕುಮಾರ ದೇಸಾಯಿ, ಯುವಮುಖಂಡರಾದ ನಿಖಿಲ್ ದೇಸಾಯಿ, ಅಜಯಕುಮಾರ ದೇಸಾಯಿ, ರಾಜು ದೇಸಾಯಿ, ಕಾಂತು ಕಳ್ಳುಗುದ್ದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net