ಬೀಡಿ, ಸಿಗರೇಟ್ ನೀಡುವಂತೆ ಕೈದಿಗಳ ಪ್ರತಿಭಟನೆ

sogane centrol jail
ಸೋಗಾನೆಯ ಕೇಂದ್ರ ಕಾರಾಗೃಹ
Published on

ಶಿವಮೊಗ್ಗ: ಬೀಡಿ, ಸಿಗರೇಟ್ ನೀಡುವಂತೆ ಆಗ್ರಹಿಸಿ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಬೆಳಗ್ಗೆ ಉಪಹಾರ ಸೇವಿಸದೆ ಕೈದಿಗಳು ಪ್ರತಿಭಟನೆ ನಡೆಸಿದರು.

ಜೈಲು ಮ್ಯಾನುಯಲ್‌ನಲ್ಲಿ ನಿಷೇಧಿತ ವಸ್ತುಗಳು ಎಂಬ ಕಾರಣಕ್ಕೆ ಬೀಡಿ, ಸಿಗರೇಟ್ ಕೊಂಡೊಯ್ಯಲು ಕೈಗರಿಕಾ ಭದ್ರತಾ ಪಡೆ ಮತ್ತು ಜೈಲು ಸಿಬ್ಬಂದಿ ನಿರ್ಬಂಧ ವಿಧಿಸಿದ್ದಾರೆ. ಹಾಗಾಗಿ ಕೈದಿಗಳಿಗೆ ಬೀಡಿ, ಸಿಗರೇಟ್ ದೊರೆಯುತ್ತಿಲ್ಲ. ಬೀಡಿ, ಸಿಗರೇಟು ಕೊಡಬೇಕೆಂದು ಆಗ್ರಹಿಸಿ ಕೈದಿಗಳು ಉಪಹಾರ ತ್ಯಜಿಸಿ ಪ್ರತಿಭಟಿಸಿದರು. ಬಳಿಕ ಜೈಲು ಅಧಿಕಾರಿಗಳು ತಿಳಿ ಹೇಳಿದ್ದರಿಂದ ಕೈದಿಗಳು ಪ್ರತಿಭಟನೆ ಕೈಬಿಟ್ಟರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸಿಗರೇಟು ಸೇದಿದ ಫೋಟೋ ವೈರಲ್ ಆದ ಬೆನ್ನಲ್ಲೇ ಶಿವಮೊಗ್ಗ ಜೈಲಿನ ಮೇಲೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಬೀಡಿ, ಸಿಗರೇಟು, ಬೆಂಕಿ ಪೊಟ್ಟಣಗಳು ಸಿಕ್ಕಿದ್ದವು. ಜೈಲಿನ ಉಸ್ತುವಾರಿ ಹೊತ್ತಿರುವ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಜೈಲು ಅಧಿಕಾರಿಗಳು ನಿಷೇಧಿತ ವಸ್ತುಗಳ ಜೈಲಿನೊಳಗೆ ಕೊಂಡೊಯ್ಯದಂತೆ ನಿರ್ಬಂಧ ವಿಧಿಸಿದ್ದು ಕೈದಿಗಳ ಅಸಮಾಧಾನಕ್ಕೆ ಕಾರಣವಾಗಿ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net