

ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ ಕ್ಷುಲಕ ವಿಚಾರಕ್ಕೆ ಕೈದಿಗಳು ಕಲ್ಲಿನಿಂದ ಬಡಿದಾಡಿಕೊಂಡಿದ್ದು ಮೂವರ ವಿರುದ್ಧ ಜೈಲು ಅಧೀಕ್ಷಕಿ ಡಾ. ಅನಿತಾ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ಆ.14ರಂದು ಸಂಜೆ 6.30ಕ್ಕೆ ಜೈಲಿನ ಭದ್ರಾ ಬ್ಲಾಕ್‌ನ ಮುಂಭಾಗ ವಿಚಾರಣಾಧೀನ ಕೈದಿಗಳಾದ ಲತೀಫ್ (20), ಶೋಹೇಬ್ ಅಲಿಯಾಸ್ ಸುಹೇಲ್ (21) ಮತ್ತು ಶಂಶೀರ್ ಅಲಿಯಾಸ್ ಗೌಸ್ ಖಾನ್ (27) ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಜೈಲು ನಿಯಮಗಳನ್ನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆ ಹದಗೆಡಿಸಿದಾರೆ ಎಂದು ಆರೋಪಿಸಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.