ಕಾರಾಗೃಹದಲ್ಲಿ ಕೈದಿಗಳ ಹೊಡೆದಾಟ

prisoner
Published on

ಕಾಸರಗೋಡು: ಕಾಞಂಗಾಡಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಬ್ಬರು ಹೊಡೆದಾಡಿಕೊಂಡ ಪರಿಣಾಮ ಒಬ್ಬ ಕೈದಿ ಗಂಭೀರ ಗಾಯಗೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಬಕಾರಿ ಬದಿಯಡ್ಕ ರೇಂಜ್ ವ್ಯಾಪ್ತಿಯಲ್ಲಿನ ಸಾರಾಯಿ ಸಾಗಾಟದ ಆರೋಪಿಯಾಗಿರುವ ರಘು ಎಂಬಾತ ಗಾಯಗೊಂಡು ಆಸ್ಪತ್ರೆ ಸೇರಿದ ಕೈದಿ. ಇನ್ನೊಂದು ಪ್ರಕರಣದ ಆರೋಪಿಯಾಗಿರುವ ವಿಚಾರಣಾಧಿನ ಕೈದಿ ಶರವಣನ್ ಮತ್ತು ರಘು ಅವರ ಮಧ್ಯೆ ಹೊಡೆದಾಟ ನಡೆದಿತ್ತು. ಇವರಿಬ್ಬರೂ ಹೊಡೆದಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net