ಕೈದಿ ಒಳಉಡುಪಿನಲ್ಲಿ ಗಾಂಜಾ ಪತ್ತೆ

ganja
Published on

ಶಿವಮೊಗ್ಗ: ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ಜೈಲು ಪಾಲಾಗಿದ್ದ ಕೆ.ಆರ್.ಪುರಂನ ಶಹೀದ್ ಖುರೇಷಿ ಬಳಿ ಗಾಂಜಾ ಪತ್ತೆಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಖುರೇಷಿಯನ್ನು ಜೈಲಿನ ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗೆ ಕರೆತಂದಾಗ ಒಳ ಉಡುಪಿನಲ್ಲಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಖುರೇಷಿಯನ್ನು ಕೆಆರ್ ಪುರಂನಲ್ಲಿ ಹಿಡಿಯಲು ಹೋದಾಗ ದೊಡ್ಡಪೇಟೆ ಪೊಲೀಸರ ಮೇಲೆ ಚಾಕು ಬೀಸಿ ತಪ್ಪಿಸಿಕೊಂಡಿದ್ದನು. ಈ ಪ್ರಕರಣದಲ್ಲಿ ಅಂದಿನ ಇನ್‌ಸ್ಪೆಕ್ಟರ್ ಗುರುನಾಯಕ್ ಗಂಭೀರ ಗಾಯಗೊಂಡಿದ್ದರು. ನಂತರ ಕೋಟೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net