ಸೆಂಟ್ರಲ್ ಜೈಲಿನಲ್ಲಿ ಕೈದಿಯ ಬರ್ತ್‌ಡೇ

Jail bld (3)
Published on

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಜನ್ಮದಿನ ಆಚರಿಸಿಕೊಂಡಿದ್ದನ್ನು ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು ಈ ಸಂಬಂಧ ಆರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಗಾನೆಯ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 30ರಲ್ಲಿ ಮೊಹಮ್ಮದ್ ಅಲಿ ಎಂಬಾತನ ಜನ್ಮದಿನ ಆಚರಿಸಿದ್ದು ಶಾಹಿದ್ ಅಲಿಯಾಸ್ ಬಚ್ಚನ್, ಶಶಿ ಪೂಜಾರಿ, ಸಿರಾಜ್, ನಿಶಾಕ್ ಪೂಜಾರಿ, ಸಚಿನ್ ಶೆಟ್ಟಿ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನ ಕಾವೇರಿ ವಿಭಾಗದಲ್ಲಿ 2023ರ ಮಾರ್ಚ್ 1ರಂದು ಕೈದಿ ಮೊಹಮ್ಮದ್ ಅಲಿಯ ಜನ್ಮದಿನ ಆಚರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಾಗರ ಠಾಣೆ ಪೊಲೀಸರು ವಿಚಾರಣೆಗೆ ಬಂದಾಗ ಕೈದಿಗಳ ಕೊಠಡಿ ಪರಿಶೀಲಿಸಿದಾಗ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿರಲಿಲ್ಲ. ಇದೀಗ ಫೋಟೋ, ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ವಿಚಾರಣೆ ನಡೆಸಿದ ಜೈಲು ಅಧೀಕ್ಷಕಿ ಡಾ. ಅನಿತಾ ಅವರು ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಫೋನ್ ಬಳಸಿದ್ದಾರೆ ಎಂದು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net