ಅಥ್ಲೆಟಿಕ್ಸ್ ನಲ್ಲಿ ಪ್ರಿಸಮ್ ಕಾಲೇಜ್ ಸಾಧನೆ

Untitled
Published on

ಧಾರವಾಡ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಪ್ರಿಸಮ್ ಕಾಲೇಜ್ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಿದ್ದರೆಡ್ಡಿ ಮೊರಬ, ಸ್ನೇಹಾ ಕಾನಪ್ಪಗೌಡರ ಹ್ಯಾಮರ್ ಥ್ರೋದಲ್ಲಿ ಬಾಲಕ- ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಭಾಗ್ಯಶ್ರೀ ಪಾಟೀಲ ಜಾವೆಲಿನ್ ಥ್ರೋದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ.
ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ದೇಶಕ ಶ್ರೀನಿವಾಸ ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ಎಸ್. ತಿಮ್ಮನಗೌಡರ, ಪ್ರಾಚಾರ್ಯ ಎಸ್.ಎಂ. ಹುಲ್ಲೂರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net