ಕಬ್ಬು ಕಟಾವಿಗೆ ಪ್ರಾಧಾನ್ಯ ನೀಡಲಿ

5SNK1
Published on

ಸಂಕೇಶ್ವರ: ಪಟ್ಟಣದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಸುಮಾರು 10 ಲಕ್ಷ ಟನ್​ ಕಬ್ಬು ನುರಿಸುವ, 1.5 ಲ ಎಥೆನಾಲ್​, 18&36 ಸಾವಿರ ಮೆಗಾವಾಟ್​ ಕೋಜನರೇಷನ್​ ಉತ್ಪಾದನೆ, ಇದಕ್ಕಾಗಿ 120&150 ದಿನ ಕಬ್ಬು ನುರಿಸುವ ಗುರಿ ಹಾಕಿಕೊಂಡಿದ್ದು, ಕಾರ್ಮಿಕರು ಶ್ರಮಿಸಬೇಕು ಎಂದು ಕಾರ್ಖಾನೆ ಮಾರ್ಗದರ್ಶಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದ ಶ್ರೀ ಹಿರಣ್ಯಕೇಶಿ ಸಹಕಾರಿ ಕಾರ್ಖಾನೆಯ 2025&26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಬಾಯ್ಲರ್​ ಪ್ರದಿಪನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಹಿಂದಿನ ವರ್ಷ 87 ದಿನದಲ್ಲಿ 5.5 ಲ ಟನ್​ ಕಬ್ಬು ನುರಿಸಲಾಗಿತ್ತು. ಹಿನ್ನಡೆ ಅನುಭವಿಸುತ್ತಿದ್ದ ಹಿರಾಶುಗರ್ಸ್​ ಏಳಿಗೆಗೆ ಕ್ರಮ ಕೆಗೊಳ್ಳಲಾಗಿದೆ. ಕಬ್ಬು ಕಟಾವಿಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು ಎಂದರು. ಈಗಾಗಲೇ ಕೆಜಿಗೆ 17 ರೂ.ನಂತೆ 50 ಕೆಜಿ ಸಕ್ಕರೆ ಸದಸ್ಯರಿಗೆ ನೀಡಲಾಗುತ್ತಿದೆ. ಕಾರ್ಮಿಕರಿಗೆ 7ನೇ ವೇತನ ನೀಡಲಾಗುತ್ತಿದೆ. ದೀಪಾವಳಿ ಬೋನಸ್​ ಬಗ್ಗೆ ಕೂಡ ಚರ್ಚಿಸಲಾಗುತ್ತಿದ್ದು, ಸದ್ಯದಲ್ಲೇ ತಿಳಿಸುತ್ತೇವೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ನೇತತ್ವದಲ್ಲಿ ಕಾರ್ಖಾನೆಗೆ ವೆಭವ ಮರಳಲಿದ್ದು, ರೆತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಬೇಕು ಎಂದು ಕೋರಿದರು. ನಿಡಸೋಸಿ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಪ್ರಸಕ್ತ ಕಬ್ಬು ನುರಿಸುವ ಹಂಗಾಮು ರೆತರ ಬದುಕಿಗೆ ಬೆಳಕು ನೀಡುವ ಜತೆಗೆ ಕಾರ್ಖಾನೆ ವೆಭವಕ್ಕೆ ಮರಳುವಂತಾಗಲಿ ಎಂದು ಹಾರೈಸಿದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಸಂಗಮ ಶುಗರ್ಸ್​ ನಿಕಟಪೂರ್ವ ಅಧ್ಯ ರಾಜೇಂದ್ರ ಪಾಟೀಲ ಮಾತನಾಡಿದರು.

ಶಂಕರಲಿಂಗ ಮಠದ ಅಭಿನವ ವಿದ್ಯಾನರಸಿಂಹ ಸ್ವಾಮೀಜಿ, ಕಾರ್ಖಾನೆ ಅಧ್ಯ ಬಸವರಾಜ ಕಲ್ಲಟ್ಟಿ, ಉಪಾಧ್ಯ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಬಾಬಾಸಾಹೇಬ ಅರಬೋಳಿ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ, ಜಿಎಂ ವೀರನಗೌಡ ದೇಸಾಯಿ, ಆಡಳಿತಾಧಿಕಾರಿ ರವೀಂದ್ರ ಚೌಗಲಾ, ಕಾರ್ಮಿಕ ಸಂಟನೆ ಅಧ್ಯ ಮೋಹನ ಕೋಠಿವಾಲೆ, ಮುಖಂಡರಾದ ಶ್ರೀಕಾಂತ ಹತನೂರಿ, ಶಂಕರರಾವ ಹೆಗಡೆ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net