ಗುಣಮಟ್ಟದ ಕಾಮಗಾರಿ ನಡೆಯಲಿ

ಯಳಂದೂರು ತಾಲೂಕಿನ ಕಂದಹಳ್ಳಿಯಿಂದ ದುಗ್ಗಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಯಳಂದೂರು ತಾಲೂಕಿನ ಕಂದಹಳ್ಳಿಯಿಂದ ದುಗ್ಗಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
Published on

ಯಳಂದೂರು: ತಾಲೂಕಿನ ಹೊನ್ನೂರು ಹಾಗೂ ಕಂದಹಳ್ಳಿ, ದುಗ್ಗಹಟ್ಟಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಡಾ ವತಿಯಿಂದ ಹೊನ್ನೂರು, ಕಂದಹಳ್ಳಿ ದುಗ್ಗಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಹೊಂಗನೂರು ಹಿರೀಕೆರೆಯಿಂದ ದಾಸನಹುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ 30 ಲಕ್ಷ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಮೂರು ಕಾಮಗಾರಿಗಳಿಗೂ 5.5 ಲಕ್ಷ ರೂ. ವೆಚ್ಚದ ಟೆಂಡರ್ ನಿಂತಿದೆ. ಈ ರಸ್ತೆಗಳು ಮುಖ್ಯವಾಗಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ರೈತರು ತಮ್ಮ ಜಮೀನಿಗೆ ವಸ್ತುಗಳನ್ನು ಸಾಗಿಸಲು, ತಮ್ಮ ಫಸಲನ್ನು ವಾಹನಗಳಲ್ಲಿ ತುಂಬಿ ಸಾಗಿಸಲು ಹೆಚ್ಚು ಅನುಕೂಲವಾಗುತ್ತದೆ. ಹಾಗಾಗಿ ಇದನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜೀಯಾಗದೆ ಕೆಲಸವನ್ನು ನಿರ್ವಹಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

ಕಾಡಾದ ಎಇಇ ಗಣೇಶ್ ಜೆಇ ನಿವೇದಿತಾ, ಗ್ರಾಪಂ ಅಧ್ಯಕ್ಷ ರೂಪೇಶ್ ಸದಸ್ಯ ಆರ್.ಪುಟ್ಟಬಸವಯ್ಯ, ರಾಜಶೇಖರ, ಕುಮಾರ, ಗುರುಪ್ರಸಾದ್ ಗುತ್ತಿಗೆದಾರರಾದ ಮಲ್ಲೇಶ್, ಮನೋಜ್, ಎಚ್.ವಿ.ಚಂದ್ರು, ಕಂಹದಳ್ಳಿ ನಂಜುಂಡಸ್ವಾಮಿ, ಬಸವಣ್ಣ, ಪ್ರಭುಶಂಕರ್, ಮೆಳ್ಳಹಳ್ಳಿ ಶಿವಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net