ಸೇನೆ ಸೇರ್ಪಡೆಗೆ ಯುವಕರ ಆದ್ಯತೆ: ಹವಾಲ್ದಾರ್ ರಾಘವೇಂದ್ರ ಸಲಹೆ

sanmana
ನಿವೃತ್ತ ಸೈನಿಕ ಹವಾಲ್ದಾರ್ ರಾಘವೇಂದ್ರ ಅವರನ್ನು ಶಾಂತಿನಿಕೇತನ ವತಿಯಿಂದ ಗೌರವಿಸಲಾಯಿತು
Published on

ಹೆಬ್ರಿ: ಪಾಕಿಸ್ತಾನದ ಭಯೋತ್ಪಾದನೆಗೆ ಭಾರತೀಯ ಸೈನಿಕರು ಹೆದರುವುದಿಲ್ಲ. ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಸೈನಿಕರು ತಾವು ಹುತಾತ್ಮರಾಗಿ ದೇಶ ರಕ್ಷಣೆಗೆ ಕಾರಣಕರ್ತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರಬೇಕು ಎಂದು ನಿವೃತ್ತ ಸೈನಿಕ ಹವಾಲ್ದಾರ್ ರಾಘವೇಂದ್ರ ಹೇಳಿದರು.

ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಯುವವೃಂದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಚ್ಚೂರು 2ರಲ್ಲಿ ಶನಿವಾರ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ನಿವೃತ್ತ ಸೈನಿಕ ಹವಾಲ್ದಾರ್ ರಾಘವೇಂದ್ರ ಅವರನ್ನು ಶಾಂತಿನಿಕೇತನದ ವತಿಯಿಂದ ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ಮಾಲಿನಿ, ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಕುಲಾಲ್, ಶಿಕ್ಷಕ ಮಂಜುನಾಥ ಶೆಟ್ಟಿ, ಶಾಂತಿನಿಕೇತನ ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಮ್ಮ ಮನೆ, ಶಾಲೆ ಹಾಗೂ ಊರಿಗೆ ನಾವೇ ಸೈನಿಕರಾಗಬೇಕು. ಸೈನಿಕ ಎಂದರೆ ದೇಶ ಕಾಯುವುದು ಮಾತ್ರವಲ್ಲ. ಉತ್ತಮ ವ್ಯಕ್ತಿತ್ವಗಳನ್ನು ಮೈಗೂಡಿಸಿ ಈ ಸಮಾಜದಲ್ಲಿ ಗೌರವತವಾಗಿ ನಡೆದುಕೊಳ್ಳುವುದು ಕೂಡ ಸೈನಿಕ ಜೀವನದಷ್ಟೇ ಮಹತ್ವವಾದದ್ದು.-ಹವಾಲ್ದಾರ್ ರಾಘವೇಂದ್ರ, ನಿವೃತ್ತ ಸೈನಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net