ಸಾವಿತ್ರಿಬಾಯಿಯಿಂದ ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ

03-01-Shiva-3
ರಾಯಚೂರಿನ ಸಾವಿತ್ರಿಬಾಯಿ ುಲೆ ವೃತ್ತದಲ್ಲಿ ಜಿಲ್ಲಾ ಹೂಗಾರ ಸಮಾಜ ಮತ್ತು ಸಾವಿತ್ರಿಬಾಯಿ ುಲೆ ಶಿಕ್ಷಕಿಯರ ಸಂಘದಿಂದ ಬುಧವಾರ ಸಾವಿತ್ರಿಬಾಯಿ ುಲೆ ಜಯಂತಿ ಆಚರಿಸಲಾಯಿತು. ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ, ಶಿಕ್ಷಕಿಯರ ಸಂಘದ ಅಧ್ಯಕ್ಷೆ ಛಾಯಾದೇವಿ, ಸಮಾಜದ ಪದಾಕಾರಿಗಳಾದ ಶಶಿಧರ ಹೂಗಾರ, ಪಂಪಾಪತಿ ಹೂಗಾರ, ಸೂಗೂರಪ್ಪ ಹೂಗಾರ, ವೀರೇಶ ಹೂಗಾರ, ವಿಶ್ವನಾಥ ಹೂಗಾರ, ಪ್ರಕಾಶ ಹೂಗಾರ, ಕಸಪಾ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಇದ್ದರು.
Published on

ರಾಯಚೂರು: ವೌಢ್ಯತೆಯಿಂದಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಅಕ್ಷರ ಜ್ಞಾನ ಕಲಿಸಿದ ಸಾವಿತ್ರಿಬಾಯಿ ುಲೆ ಪರಿಶ್ರಮದ ಲವಾಗಿ ಇಂದು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುವಂತಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಸ್ಥಳೀಯ ಸಾವಿತ್ರಿಬಾಯಿ ುಲೆ ವೃತ್ತದಲ್ಲಿ ಜಿಲ್ಲಾ ಹೂಗಾರ ಸಮಾಜ ಹಾಗೂ ಕರ್ನಾಟಕ ಸಾವಿತ್ರಿಬಾಯಿ ುಲೆ ಶಿಕ್ಷಕಿಯರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ಜಯಂತಿ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹೂಗಾರ ಸಮಾಜದಲ್ಲಿ ಹುಟ್ಟಿದ್ದರೂ ಸಾವಿತ್ರಿಬಾಯಿ ುಲೆ ಹಾಗೂ ಜ್ಯೋತಿಬಾ ುಲೆ ಬದುಕು ಸರ್ವ ಸಮುದಾಯಗಳ ಪರವಾಗಿತ್ತು. ಇಂತಹ ಮಹಾನ್ ಸಾಧಕರನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸದೇ ಎಲ್ಲರೂ ಆಚರಿಸುವಂತಾಗಬೇಕು ಎಂದರು.
ಸಾವಿತ್ರಿಬಾಯಿ ುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಛಾಯಾದೇವಿ ಮಾತನಾಡಿ, ಸಂಘ ಸಾವಿತ್ರಿಬಾಯಿಯ ಚಿಂತನೆಗಳನ್ನು ಇಂದಿನ ಸಮಾಜದಲ್ಲಿ ಬಿತ್ತನೆ ಮಾಡಲು ಪ್ರಯತ್ನಿಸುತ್ತಿದೆ. ನಗರದಲ್ಲಿ ಸಾವಿತ್ರಿಬಾಯಿ ುಲೆ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಮತ್ತು ನಗರಸಭೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ ಮಾತನಾಡಿ, ಶಿಕ್ಷಕಿಯರಿಗೆ ಸನ್ಮಾನಿಸುವ ಮೂಲಕ ಸಾವಿತ್ರಿಬಾಯಿ ುಲೆಯ ಸ್ಮರಣೆ ಮಾಡಿದ್ದೇವೆ. ಸಾವಿತ್ರಿಬಾಯಿಯ ಚಿಂತನೆಗಳು ಇಂದಿನ ಪೀಳಿಗೆಯಲ್ಲಿ ತುಂಬುವ ಮೂಲಕ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ವೈಶಾಲಿ ಪಾಟೀಲ್, ನಾಗವೇಣಿ, ಸುಖಲತಾ, ಸಬೀತಾ, ಪುಷ್ಪಲತಾ, ರಾಜೇಶ್ವರಿ, ಹೀಮ್ ಸುಲ್ತಾನಾರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಹೂಗಾರ ಸಮಾಜದ ಪದಾಕಾರಿಗಳಾದ ಶಶಿಧರ ಹೂಗಾರ, ಪಂಪಾಪತಿ ಹೂಗಾರ, ಸೂಗೂರಪ್ಪ ಹೂಗಾರ, ವೀರೇಶ ಹೂಗಾರ, ವಿಶ್ವನಾಥ ಹೂಗಾರ, ಪ್ರಕಾಶ ಹೂಗಾರ, ಕಸಪಾ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ವಿವಿಧ ಸಂಘಟನೆ ಪದಾಕಾರಿಗಳಾದ ವಿಜಯಭಾಸ್ಕರ ಇಟಗಿ, ಸೈಯದ್ ಹಫಿಜುಲ್ಲಾ, ಮಹೇಶ್ವರಿ, ಲಕ್ಷ್ಮಿ, ಧನಲಕ್ಷ್ಮಿ, ಅಂಜಲಿ ಬಿರಾದರ, ಶಾರದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net