ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಆದ್ಯತೆ

4 mbl 3
Published on

ಮುಳಬಾಗಿಲು: ರೋಟರಿ ಸಂಸ್ಥೆ ಸದಾ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿರುತ್ತದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಳಮಟ್ಟದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದು ರೋಟರಿ ಮುಳಬಾಗಿಲು ಸೆಂಟ್ರಲ್​ ಅಧ್ಯಕ್ಷ ತಿಪ್ಪದೊಡ್ಡಿ ಆರ್​. ಶ್ರೀನಿವಾಸರೆಡ್ಡಿ ಹೇಳಿದರು.

ನಗರದ ಮುತ್ಯಾಲಪೇಟೆಯ ಪೂಲ್​ಚಂದ್​ ಲೇಔಟ್​ನ ರೋಟರಿ ಭವನದಲ್ಲಿ ತಾಲೂಕಿನ 7 ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಕಂಪ್ಯೂಟರ್​ ಕಲಿಕೆಗೆ 14 ಲ್ಯಾಪ್​ಟಾಪ್​ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಮುಳಬಾಗಿಲು ರೋಟರಿಯಿಂದ ಹ್ಯಾಪಿ ಸ್ಕೂಲ್​ ಯೋಜನೆಯಲ್ಲಿ ಸರ್ಕಾರಿ ಶಾಲೆಗಳ ನೂತನ ಕಟ್ಟಡಗಳು, ಹಳೇ ಕಟ್ಟಡಗಳ ದುರಸ್ತಿ ಮಾಡುತ್ತಿರುವುದರ ಜತೆಗೆ ಪೀಠೋಪಕರಣಗಳನ್ನು ನೀಡುವ ಮೂಲಕ ಶೈಕ್ಷಣಿಕ ಬಲವರ್ಧನೆಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇದೆ ಎಂದರು.

ರೋಟರಿ ಉಪಪಾಲಕ ಎನ್​.ರವೀಂದ್ರನಾಥ್​ ಮಾತನಾಡಿ, ರೋಟರಿ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್​ ಪೋಲಿಯೋ ನಿಮೂರ್ಲನೆಗೆ ವಿಶ್ವ ವ್ಯಾಪಿ ಕಾರ್ಯನಿರ್ವಹಿಸಿದೆ ಎಂದರು.

ರಾಜ್ಯ ಮತ್ತು ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸರ್ಕಾರ ಮತ್ತು ಆರೋಗ್ಯ ಇಲಾಖೆ ಜತೆಯಲ್ಲಿ ಕಾರ್ಯನಿರ್ವಹಿಸಿ ಸೇವೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎಂದರು.

ಸದಸ್ಯರಾದ ರಘುನಾಥಯ್ಯ, ಎಂ. ಗೊಲ್ಲಹಳ್ಳಿ ಪ್ರಭಾಕರ್​, ಆರ್​. ಕೆ. ಸುದರ್ಶನ್​ ಬಾಬು, ರೋಟರಿ ಐಟಿ ಕಂಟ್ರೋಲ್​ನ ಶ್ರೀರಂಗ, ರಮೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net