ರಸ್ತೆಗಳ ಸುಧಾರಣೆಗೆ ಆದ್ಯತೆ

Priority given to road improvement
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುಧಾರಣೆ ಕಾಮಗಾರಿಗೆ ವಿಪ ಸದಸ್ಯ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಶಿವಲಿಂಗಯ್ಯ ಹಿರೇಮಠ, ರೇಣುಕಸ್ವಾಮಿ ಹಿರೇಮಠ, ಸದಾಶಿವ ಚಿಕರೆಡ್ಡಿ ಮತ್ತಿತರರಿದ್ದರು.
Published on

ವಿಜಯಪುರ: ಗ್ರಾಮೀಣ ಭಾಗದಲ್ಲಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವ ಜತೆಗೆ ಗುಣಮಟ್ಟದ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ವಿಪ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಮಂಗಳವಾರ ಬಬಲೇಶ್ವರ ತಾಲೂಕಿನ ಸಾರವಾಡ ಮತ್ತು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಗಳಲ್ಲಿ ತಲಾ 100 ಲ ರೂ. ಗಳ ವೆಚ್ಚದಲ್ಲಿ ಪಿಆರ್​ಇಡಿ ಇಲಾಖೆಯ ವತಿಯಿಂದ ನಿರ್ಮಿಸುತ್ತಿರುವ ಸಾರವಾಡ& ದದಾಮಟ್ಟಿವರೆಗಿನ 6 ಕಿ.ಮೀ. ಮತ್ತು ಹೊನಗನಗಳ್ಳಿ& ದದಾಮಟ್ಟಿ ವರೆಗೆ 4 ಕಿಮೀ. ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ತಂದೆ ದಿ. ಬಿ.ಎಂ. ಪಾಟೀಲರ ಕಾಲದಿಂದಲೂ ನಾವು ಶಿಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಸದ್ಯ ಶಾಲೆಗಳಲ್ಲಿ ಡಿಜಿಟಲ್​ ಬೋರ್ಡ್​, ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಸಚಿವ ಎಂ.ಬಿ. ಪಾಟೀಲರು ಈ ಬಾರಿ ಶಿಣ ಕ್ರಾಂತಿಯ ಕನಸು ಹೊಂದಿದ್ದಾರೆ. ಹೀಗಾಗಿ, ಮತೇತ್ರ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಕುರಿತು ಈಗಾಗಲೇ ಸಮೀೆ ನಡೆದಿದ್ದು, 100 ಕೋ. ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಿವಲಿಂಗಯ್ಯ ಹಿರೇಮಠ, ರೇಣುಕಸ್ವಾಮಿ ಹಿರೇಮಠ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಜಯಗೌಡ ಪಾಟೀಲ, ಶಿವನಿಂಗಯ್ಯ ಹಿರೇಮಠ, ಮಲಕನಗೌಡ ಪಾಟೀಲ, ರುದ್ರಗೌಡ ಬಿರಾದಾರ, ನಚಿಕೇತ ಬಿದರಿ, ರಮೇಶ ಕಾಂಬಳೆ, ಹಣಮಂತ ಹಚಡದ, ಪಿಆರ್​ಇಡಿ ಎಇಇ ರವಿ ಪವಾರ, ಪಿಡಿಒ ಗೀತಾ ಕಲ್ಲವ್ವಗೋಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net