ತಾಲೂಕಿನಾದ್ಯಂತ ಗುಣಮಟ್ಟದ ರಸ್ತೆ ಅಭಿವೃದ್ಧಿಗೆ ಆದ್ಯತೆ

01 10 2025_BGR RURAL_PAGE_7D
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಬಿಸನಹಳ್ಳಿಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಭೂಮಿ ಪೂಜೆ ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್​, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಉದ್ಯಮಿಗಳಾದ ಸಿ.ಜಯರಾಜ್​ ಇದ್ದರು.
Published on

ನಂದಗುಡಿ : ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿ ಹೊಂದಬೇಕಾದರೆ ಗುಣಮಟ್ಟದ ರಸ್ತೆಗಳಿರಬೇಕು. ಆದ್ದರಿಂದ ತಾಲೂಕಿನಲ್ಲಿ ಗುಣಮಟ್ಟದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು. ಹೊಸಕೋಟೆ ತಾಲೂಕಿನ ವಡ್ಡಹಳ್ಳಿ, ಕರಪ್ಪನಹಳ್ಳಿ, ದೊಡ್ಡನಹಳ್ಳಿ, ಬಿಸನಹಳ್ಳಿ, ಸಿ.ಟಿ.ಗೊಲ್ಲಹಳ್ಳಿ, ಗಡಿಗೇನಹಳ್ಳಿ ಹಾಗೂ ಲಿಂಗಾಪುರ ಗ್ರಾಮಗಳಲ್ಲಿ ತಲಾ 20 ಲಕ್ಷ ರೂ.ಗಳ ಎಸ್​ಸಿಪಿ&ಟಿಎಸ್​ಪಿ ಯೋಜನೆ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಒಟ್ಟು 1.5 ಕೋಟಿ ರೂ. ವೆಚ್ಚದ ಸಿ.ಸಿ.ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಹಂತಹಂತವಾಗಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ರಸ್ತೆಗಳ ಡಾಂಬರೀಕರಣ ಮತ್ತು ಸಿಮೆಂಟ್​ ಕಾಂಕ್ರೀಟ್​ ರಸ್ತೆ ಮಾಡಲಾಗುತ್ತಿದೆ. ಪ್ರತಿ ಗ್ರಾಪಂನಲ್ಲಿ ಅಗತ್ಯತೆಗೆ ಅನುಗುಣವಾಗಿ ಜನರಿಗೆ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಗ್ರಾಮೀಣಾ ಭಾಗದ ಜನರಿಗೆ ಸಮುದಾಯ ಭವನ, ಕುಡಿಯುವ ನೀರು, ಚರಂಡಿ, ಶಾಲಾ&ಕಾಲೇಜುಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಬಳಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ, ಮಾದರಿ ೇತ್ರವನ್ನಾಗಿಸುವುದೇ ಧ್ಯೇಯವಾಗಿದೆ ಎಂದರು. ಕಲ್ಕೆರೆ ಕೆ.ಎಸ್​.ಮಹದೇವಯ್ಯ, ಎಂ.ಮಂದೀಪ್​ಗೌಡ, ತಾಪಂ ಮಾಜಿ ಸದಸ್ಯರಾದ ಯರ್ರೇಗೌಡ, ಗಡಿಗೇನಹಳ್ಳಿ ನಂಜಪ್ಪ, ಟಿಎಪಿಸಿಎಂಎಸ್​ ನಿರ್ದೇಶಕರಾದ ಪಿ.ನಾರಾಯಣಪ್ಪ, ಎಸ್​.ಪಿ.ಕೃಷ್ಣಪ್ಪ, ಮುಖಂಡರಾದ ಗುರುಬಸಪ್ಪ, ಯಲ್ಲಪ್ಪ, ಬಿ.ಎಂ.ಮುನಿರಾಜು, ತ್ರಿವೇಣ್​ಕುಮಾರ್​, ದೊಡ್ಮನೆ ರಮೇಶ್​, ಮುನಿಯಪ್ಪ, ಗುತ್ತಿಗೆದಾರರಾದ ವಿನಯ್​, ರುದ್ರೇಶ್​, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net