ವಚನಗಳ ಸಂರಕ್ಷಣೆಗೆ ಆದ್ಯತೆ

Untitled-2
ನೆಲಮಂಗಲದ ಶ್ರೀ ಬಸವಣ್ಣ ದೇವರ ಮಠದಲ್ಲಿ ವಚನ ಸಾಹಿತ್ಯ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ಸರ್ಕಾರಿ ನಿವೃತ್ತಿ ನೌಕರರ ಸಂದ ಗೌರವಾಧ್ಯಕ್ಷ ಶಣ್ಮುಖಪ್ಪ, ಕಾರ್ಯದರ್ಶಿ ಸಿದ್ದಗಂಗಪ್ಪ, ಕದಳಿ ಮಹಿಳಾ ವೇದಿಕೆ ಗೌರವಾಧ್ಯೆ ನಿರ್ಮಲಾ, ಸದಸ್ಯರಾದ ರೇಣುಕಮ್ಮ, ಶೀಲಾ, ದೇವಿಕಾ, ರಾಜಶೇಶ್ವರಿ, ಮಂಜುಳಾ, ಗೀತಾರಾಥಾ, ಶಾರದಾ, ಸುಮಲತಾ, ಪ್ರಮೀಳಾ ಇದ್ದರು.
Published on

ನೆಲಮಂಗಲ : ಹನ್ನೆರಡನೇ ಶತಮಾನದ ನಂತರ ಕತ್ತಲೆಯಲ್ಲಿದ್ದ ವಚನ ಸಾಹಿತ್ಯದ ಮೆಟ್ಟಿಲುಗಳ ಮೇಲೆ ಹುಣ್ಣಿಮೆಯ ಚಂದಿರನಂತೆ ದಿವ್ಯ ಬೆಳಕು ಚೆಲ್ಲಿದ್ದು ವಚನ ಪಿತಾಮಹ ಫ.ಗು.ಹಳಕಟ್ಟಿ ಎಂದು ಕದಳಿ ಮಹಿಳಾ ವೇದಿಕೆ ಅಧ್ಯೆ ಮಂಜುಳಾ ಸುರೇಶ್​ ಬಣ್ಣಿಸಿದರು.

ನಗರದ ಶ್ರೀ ಬಸವಣ್ಣ ದೇವರ ಮಠದಲ್ಲಿ ತಾಲೂಕು ವಚನ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಚನ ಸಾಹಿತ್ಯ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನೇತೃತ್ವದಲ್ಲಿ ಸಮಾಜದಲ್ಲಿನ ಅಜ್ಞಾನ ಅಳಿಸಲು ಬೃಹತ್​ ವಚನ ಸಾಹಿತ್ಯದ ಭಂಡಾರ ರಚನೆಯಾಯಿತು. ಆದರೆ, ಕಲ್ಯಾಣ ಕ್ರಾಂತಿಯ ವೇಳೆ ಸಾಕಷ್ಟು ವಚನಗಳು ಜನರಿಂದ ದೂರವಾದವು. ಹೊರ ಜಗತ್ತಿಗೆ ಮರೆಯಾಗಿದ್ದ ವಚನಗಳನ್ನು ಸಂಶೋಧಿಸಿ, ಅಧ್ಯಯನ ಮಾಡಿದ ಹಳಕಟ್ಟಿ ನಾಡಿಗೆ ಪರಿಚಯಸಿದರು. ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ ಇವರು ಸ್ವತ@ ಮಗ ಸಾವನ್ನಪ್ಪಿದ ಸಂದರ್ಭದಲ್ಲಿ ಕೂಡ ವಚನಗಳನ್ನು ಶೇಖರಣೆ ಮಾಡುವುದನ್ನು ನಿಲ್ಲಿಸಲಿಲ್ಲ. ಈ ನಿಟ್ಟಿನಲ್ಲಿ ವಚನ ಸಾಹಿತ್ಯ ಸಂರಕ್ಷಣೆಗೆ ಹಳಕಟ್ಟಿ ಅವರ ಕೊಡುಗೆ ಅಪಾರ ಎಂದರು.

ಜನರ ನೋವಿಗೆ ಸ್ಪಂದನೆ : ಹಳಕಟ್ಟಿ ಅವರು ಮನೆ, ಆಸ್ತಿ ಮಾರಿ ವಚನ ಸಾಹಿತ್ಯದ ಸಂರಕ್ಷಣೆಗೆ ತೊಡಗಿಸಿಕೊಂಡಿದ್ದರು. ಅವರ ಪರಿಶ್ರಮ ಮತ್ತು ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸುವ ಕೆಲಸವಾಗಬೇಕು. ಸ್ವಂತ ಮುದ್ರಣಾಲಯದಲ್ಲಿ ವಚನಗಳನ್ನು ಅಚ್ಚು ಹಾಕಿ, ತಮ್ಮದೇ ಸಂಪಾದಕತ್ವದ ಶಿವಾನುಭವ, ನವಕರ್ನಾಟಕ ನಿಯತ ಕಾಲಿಕೆಗಳ ಮೂಲಕ ವಚನಗಳು ಜನರ ಗಮನ ಸೆಳೆಯುವಂತೆ ಮಾಡಿದರು ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಬಿ.ಶಿವಶಂಕರಯ್ಯ ಹೇಳಿದರು. ವಿಜಯಪುರದಲ್ಲಿ ಬಿಎಲ್​ಡಿ ಶಿಕ್ಷಣ ಸಂಸ್ಥೆ ಆರಂಭಿಸಿ ಸಾವಿರಾರು ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಿದರು. ಸಿದ್ದೇಶ್ವರ ಬ್ಯಾಂಕ್​ ಆರಂಭಿಸಿ ಜನರಲ್ಲಿ ಆರ್ಥಿಕ ವ್ಯವಹಾರ ನಡೆಸುವ ಬಗ್ಗೆ ಕಲಿಸಿಕೊಟ್ಟರು. ಬರ ಆವರಿಸಿದ್ದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನರ ನೋವಿಗೆ ಸ್ಪಂದಿಸಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net