ಅಥಣಿ ಭಾಗದಲ್ಲಿ ಶಾಲೆ ಆರಂಭಕ್ಕೆ ಆದ್ಯತೆ

14ATHANI3
Published on

ಅಥಣಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 79 ವರ್ಷ ಗತಿಸಿದರೂ ಅಥಣಿ ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢಶಾಲೆ ಇರಲಿಲ್ಲ. ಇದರಿಂದ ಬಡಕುಟುಂಬಗಳ ಮಕ್ಕಳು ಉಚಿತ ಶಿಣದಿಂದ ವಂಚಿತರಾಗಿದ್ದರು. ಇದೀಗ ಪಟ್ಟಣಕ್ಕೆ ಎರಡು ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಳು ಪ್ರಾಥಮಿಕ ಶಾಲೆಗಳನ್ನು ಉನ್ನತಿಕರಿಸಿ 9 ಪ್ರೌಢಶಾಲೆಗಳ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.

ಪಟ್ಟಣದ ವಿಕ್ರಮಪುರ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರೌಢಶಾಲೆ ತರಗತಿಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪಟ್ಟಣದ ಗವಿಸಿದ್ದೇಶ್ವರ ಮಡ್ಡಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲೂ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ 9ನೇ ತರಗತಿ ಆರಂಭಗೊಂಡಿದೆ. ಮುಂಬರುವ ವರ್ಷದಲ್ಲಿ 10ನೇ ತರಗತಿ ಆರಂಭವಾಗಲಿದೆ ಎಂದರು.

ರಾಜ್ಯದಲ್ಲಿ ಶೇ. 60 ಮಕ್ಕಳಿಗೆ ಖಾಸಗಿ ಸಂಸ್ಥೆಗಳು ಶಿಣ ನೀಡುತ್ತಿವೆ. ಶೇ. 40 ಮಕ್ಕಳಿಗೆ ಸರ್ಕಾರಿ ಶಾಲೆಗಳು ಶಿಣ ನೀಡುತ್ತಿವೆ. ಸರ್ಕಾರಿ ಶಿಕರೂ ಗುಣಮಟ್ಟದ ಶಿಣ ನೀಡಬೇಕು. ರಾಜ್ಯ ಸರ್ಕಾರ ರಾಜ್ಯದಲ್ಲಿ ದ್ವಿಭಾಷೆ ಶಿಣ ಆರಂಭಿಸಿದ ನಂತರ 11 ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಿಗೆ ಮಂಜೂರಾತಿ ಪಡೆದುಕೊಳ್ಳಲಾಗಿದೆ ಎಂದರು.

ಪುರಸಭೆ ಅಧ್ಯೆ ಶಿವಲೀಲಾ ಬುಟಾಳೆ, ಉಪಾಧ್ಯೆ ಭುವನೇಶ್ವರಿ ಯಂಕಚ್ಚಿ ಮಾತನಾಡಿ, ಬಡಮಕ್ಕಳು ಪ್ರೌಢಶಾಲೆ ಶಿಣದ ಸದುಪಯೋಗ ಪಡೆಯಬೇಕೆಂದರು. ಎಸ್​ಡಿಎಂಸಿ ಅಧ್ಯ ರಾಕೇಶ ಮೆಗೂರ ಪ್ರಾಸ್ತಾವಿಕ ಮಾತನಾಡಿದರು. ಶಿಣಾಧಿಕಾರಿ ಎಂ.ಆರ್​.ಮುಂಜೆ, ತಾಪಂ ಇಒ ಶಿವಾನಂದ ಕಲ್ಲಾಪುರ, ಸಮನ್ವಯಾಧಿಕಾರಿ ಜಿ.ಎ.ಖೋತ, ಪುರಸಭಾ ಸ್ಥಾಯಿ ಸಮಿತಿ ಅಧ್ಯ ದತ್ತಾ ವಾಸ್ಟರ್​, ಸದಸ್ಯರಾದ ರಾಜು ಗುಡೋಡಗಿ, ಮಲ್ಲೇಶ ಹುದ್ದಾರ, ವಿಲಿನ ಯಳಮಲೆ, ನರಸು ಬಡಕಂಬಿ, ಶಿವಶಂಕರ ಹಂಜಿ, ಅಮರ ದುರ್ಗಣವರ, ಅರುಣ ಯಲಗುದ್ರಿ, ಎಸ್​.ಆರ್​.ೂಳಪ್ಪನವರ, ಪ್ರಶಾಂತ ತೋಡಕರ, ಎಂ.ಎ.ಚೌಗಲಾ, ಜಿ.ಎನ್​.ಕುಂಬಾರ, ಎಸ್​.ಎಸ್​.ಮುಗಳಖೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net