ನಾಲೆಗಳ ಆಧುನೀಕರಣಕ್ಕೆ ಆದ್ಯತೆ

5KMD-2
Published on

ಕೆ.ಎಂ.ದೊಡ್ಡಿ: ನೀರು ಬಹಳಷ್ಟು ಪೋಲಾಗುತ್ತಿರುವ ಹಿನ್ನೆಲೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ನಾಲೆಗಳ ಆಧುನೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಸಮೀಪದ ದೇವರಹಳ್ಳಿ-ಕುರಿಕೆಂಪನದೊಡ್ಡಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಲೋಕಸರ ಶಾಖಾ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಾಲೆಗಳು ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ವ್ಯರ್ಥವಾಗುತ್ತಿದೆ. ಇದನ್ನು ಮನಗೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿ ಕೈಗೊತ್ತಿಕೊಳ್ಳಲಾಗಿದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಪದ್ಧತಿಯನ್ನು ರೈತರು ಅನುಸರಿಸಬೇಕು. ಒಂದೇ ಬೆಳೆಗೆ ಜೋತು ಬೀಳದೆ ವಿವಿಧ ಬೆಳೆಗಳ ಬಗ್ಗೆ ಹೆಚ್ಚಿನ ಆಶಕ್ತಿ ಬೆಳೆಸಿಕೊಂಡು ಬೇಸಾಯ ಮಾಡಿದರೆ ಆರ್ಥಿಕ ಪ್ರಗತಿ ಸಾಧಿಸಬಹುದು. ಈ ನಿಟ್ಟಿಲ್ಲಿ ರೈತರು ಹೊಸ ಆಲೋಚನೆಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದ್ದು, ಅಲ್ಲಿ ನೀರಿನ ಮಹತ್ವ ತಿಳಿದಿದ್ದಾರೆ. ಆದರೆ ನಮ್ಮ ಜನ ನೀರನ್ನು ಪೋಲು ಮಾಡುತ್ತಿದ್ದಾರೆ. ಮೊದಲು ರೈತರು ನೀರಿನ ಮಹತ್ವ ತಿಳಿದುಕೊಳ್ಳಬೇಕು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದು ಎಂಬುವುದನ್ನು ಅರಿತು, ಮಿತವಾಗಿ ಬಳಸಬೇಕು ಎಂದು ತಿಳಿಸಿದರು.

ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಹಳ್ಳಿ ದೊಡ್ಡೇಗೌಡ, ಗ್ರಾಪಂ ಅಧ್ಯಕ್ಷ ಶಿವಲಿಂಗೇಗೌಡ, ಸದಸ್ಯ ದೇವರಹಳ್ಳಿ ಡಿ.ಎನ್.ರಘು, ಮುಖಂಡರಾದ ಮೊಜ್ಜೆ ಕೃಷ್ಣ, ಜಯರಾಮು, ಪುಟ್ಟಸ್ವಾಮಚಾರಿ, ಅರ್ಕೇಶ್, ದೇವರಹಳ್ಳಿ ನಂದೀಶ್, ವಿಷಕಂಠೇಗೌಡ, ರಮೇಶ್, ಅನಿಲ್, ಬಿರೇಶ್, ಮಾಳಗಯ್ಯ, ಸಂತೋಷ್, ಮುರುಳಿ, ಶ್ರೀಧರ್, ನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net