

ಶಿರಹಟ್ಟಿ: ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಕುಸ್ಲಾಪುರ ಗ್ರಾಮದಲ್ಲಿ ಸಿಎಂಆರ್‌ಎಫ್ ಯೋಜನೆ ಅಡಿ 50 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಹಾಗೂ ಮೂಲಸೌಕರ್ಯಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳ ಸುಧಾರಣೆಗೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತಿದೆ. ಹದಗೆಟ್ಟ ರಸ್ತೆಗಳ ಸುಧಾರಣೆಗೆ ಅನುದಾನ ಕೋರಿ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಈಗಾಗಲೇ ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆದಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಮುಂದಿನ ತಿಂಗಳು ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದು, ರೈತರಿಗೆ ಅನುಕೂಲವಾಗುವಂತಹ ನೀರಾವರಿ ಸೌಲಭ್ಯ ಸೇರಿದಂತೆ ಕೆಲ ಜನೋಪಯೋಗಿ ಕಾರ್ಯಗಳಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪರಸಗೌಡ ಪಾಟೀಲ್, ಜಾನು ಲಮಾಣಿ, ಶಂಕರ್ ಮರಾಠೆ, ಮಲ್ಲಿಕಾರ್ಜುನ ಅಂಗಡಿ, ತಿಪ್ಪಣ್ಣ ಕೊಂಚಿಗೇರಿ, ಪ್ರವೀಣ್ ಗೌಡ ಪಾಟೀಲ್, ಕೆಐಆರ್‌ಡಿಎಲ್ ಜೆಇ ಅನಿಲಕುಮಾರ, ವೆಂಕನಗೌಡ ಪಾಟೀಲ್, ಚನ್ನಬಸವ ಗುಡಿಗೇರಿ, ಗುಡದಪ್ಪ ಭಂಡಾರಿ ತಿಪ್ಪಣ್ಣ, ಹಾಲನಗೌಡ ಪಾಟೀಲ್, ಹನುಮಂತ ಬಡಿಗೇರ್, ನಿಂಗಪ್ಪ ಗುಡ್ಡಬೇರಿ ಇತರರಿದ್ದರು.
ಪೋಟೋ 6 ಎಸ್ ಆರ್ ಟಿ 1
ಶಿರಹಟ್ಟಿ ತಾಲೂಕಿನ ಕುಸ್ಲಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಚಂದ್ರು ಲಮಾಣಿ ಭೂಮಿಪೊಜೆ ನೆರವೇರಿಸಿದರು. ಜಾನು ಲಮಾಣಿ, ಶಂಕರ್ ಮರಾಠೆ, ಮಲ್ಲಿಕಾರ್ಜುನ ಅಂಗಡಿ, ತಿಪ್ಪಣ್ಣ ಕೊಂಚಿಗೇರಿ ಇತರರಿದ್ದರು.