

ಇಂಡಿ: ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಕೆರೆಗಳನ್ನು ತುಂಬಿಸುವುದಕ್ಕೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಹೇಳಿದರು.
ಸಾಲೋಟಗಿ ಗ್ರಾಮದ ಕೃಷ್ಣಾ ನೀರಾವರಿ ಇಲಾಖೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಕಾಲುವೆ ಮೂಲಕ ನೀರು ಹೋಗದಿರುವ ಗ್ರಾಮಗಳ ವ್ಯಾಪ್ತಿಯ ಹಳ್ಳಗಳಿಗೆ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಹಳ್ಳ ಕೊಳ್ಳ ಬಾಂದಾರುಗಳನ್ನು ತುಂಬಿದೆ ಎಂದರು.
ತಾಲೂಕಿನ ಬಳಗಾನೂರ ಕೆರೆ, ಸಂಗೋಗಿ ಕೆರೆ, ತುಂಬಿ ನಾದ ದೊಡ್ಡ ಹಳ್ಳ, ಮಾರ್ಸನಳ್ಳಿ ಬಳಿಯ ಹಳ್ಳ, ಹತ್ತಳ್ಳಿ ಹಾವಿನಾಳ ಅಗರಖೇಡ, ಹಿರೇಬೇವನೂರ, ಚಿಕ್ಕಬೇವನೂರ, ಮಿರಗಿ, ಗೋಳಸಾರ, ಹಲಸಂಗಿ, ಹಳ್ಳ ಸೇರಿ ಹಲವು ಕಾಲುವೆಗಳ ಮೂಲಕ ಭೀಮಾನದಿಗೆ ಸೇರಿದೆ. ಇದರಿಂದ ತಾಲೂಕಿನ ಜನರಿಗೆ ಕುಡಿಯುವ ನೀರಿನ ಜತೆಗೆ ಜನ ಜಾನುವಾರುಗಳಿಗೆ ನೀರಿನ ತೊಂದರೆ ಆಗುವುದಿಲ್ಲ ಎಂದರು.